ದೇಶಪ್ರಮುಖ ಸುದ್ದಿ

ಮಾ.31 ರೊಳಗೆ ದೊಡ್ಡ ಮೊತ್ತದ ವಹಿವಾಟಿನ ಮಾಹಿತಿ ನೀಡದಿದ್ದರೆ ದಂಡ: ಆದಾಯ ತೆರಿಗೆ ಇಲಾಖೆ

ನವದೆಹಲಿ,ಫೆ.10-ಕಳೆದ ಒಂದು ವರ್ಷದಲ್ಲಿ ಬ್ಯಾಂಕ್ ಖಾತೆಗೆ ದೊಡ್ಡ ಮೊತ್ತದ ಹಣ ಜಮೆ ಮಾಡಿದ್ದರೆ ಅಥವಾ ವಹಿವಾಟು ನಡೆಸಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾ.31 ರೊಳಗೆ ಮಾಹಿತಿ ನೀಡದಿದ್ದರೆ ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆಯವರು ಎಚ್ಚರಿಕೆ ನೀಡಿದ್ದಾರೆ.

ವಿನಾಯಿತಿಗಳ ಲೆಕ್ಕಾಚಾರಕ್ಕೆ ಮೊದಲು ತೆರಿಗೆ ವ್ಯಾಪ್ತಿಗೆ ಬರುವವರೂ ಈ ಮಾಹಿತಿಯನ್ನು ಸಲ್ಲಿಸಬೇಕು. ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟಂಬಗಳು, ಕಂಪನಿಗಳು, ಟ್ರಸ್ಟ್‌ಗಳು, ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೂ ಇದು ಅನ್ವಯವಾಗಲಿದೆ. ಮಾ.31 ರೊಳಗೆ ರಿಟರ್ನ್ಸ್‌ ಸಲ್ಲಿಸದವರು ಮುಂದೆಂದೂ ಸಲ್ಲಿಸಲು ರಿಟರ್ನ್ಸ್ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದಿದೆ. (ವರದಿ-ಎಂ.ಎನ್)

Leave a Reply

comments

Related Articles

error: