ಕರ್ನಾಟಕನಮ್ಮೂರುಪ್ರಮುಖ ಸುದ್ದಿಮೈಸೂರು

ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸುವಂತೆ ಸಿಎಂಗೆ ಜಿಟಿಡಿಯಿಂದ ಪಂಥಾಹ್ವಾನ

ಸಿಎಂ ವಿರುದ್ಧ ವಿಧಾನಸಭಾದಲ್ಲಿ ಹಕ್ಕು ಚ್ಯುತಿ ಮಂಡನೆ

ಮೈಸೂರು,ಫೆ.10 : ರಾಜ್ಯದ 224 ಕ್ಷೇತ್ರದಲ್ಲಿ ಎಲ್ಲಿ ಸ್ಪರ್ಧಿಸಿದರೂ ಗೆಲ್ಲುವೆ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷಣವಾಗಿ  ಪ್ರತಿಕ್ರಿಯಿಸಿರುವ ಶಾಸಕ ಜಿ.ಟಿ.ಡಿ  ಯಾವುದೇ ಕ್ಷೇತ್ರದಲ್ಲಿ ಸ್ಪರ್ಥಿಸಿದರು ಸಿಎಂ ಸೋಲು ಶತಸಿದ್ಧ ಎಂದು ಭವಿಷ್ಯ ನುಡಿದು, ಚಾಮುಂಡೇಶ್ವರಿ ಕ್ಷೇತ್ರದ ಮೇಲಿದ್ದು ರಾಜ್ಯದ ಗಮನವಿದ್ದು ತಾವು ಇಲ್ಲಿಯೇ ಸ್ಪರ್ಧಿಸಬೇಕೆಂದು ಪಂಥಾಹ್ವಾನ ನೀಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಯುವ ಸರ್ಕಾರಿ ಕಾಮಗಾರಿಗಳ ಉದ್ಘಾಟನೆಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನೇ ಆಹ್ವಾನಿಸದೇ ಸಿಎಂ ಪುತ್ರ ಯತೀಂದ್ರ ಹಾಗೂ ಹಿಂಬಾಲಕರು ನಡೆಸುತ್ತಿದ್ದಾರೆಂದು ಕಿಡಿಕಾರಿ, ಅಲ್ಲದೇ ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳ ಶಂಕುಸ್ಥಾಪನೆಯನ್ನು  ಸಿಎಂ ಪುತ್ರ ಡಾ.ಯತೀಂದ್ರ ಚಾಲನೆ ನೀಡಿ ಕ್ಷೇತ್ರವನ್ನು ಸಿಎಂ ಮಾದರಿ ಕ್ಷೇತ್ರವನ್ನಾಗಿ ಮಾಡುವರು ಎಂದು ಘೋಷಣೆ ಮಾಡಲು ಇವರ್ಯಾರು ? ಬಿಜೆಪಿಯವರು ಸಂವಿಧಾನ ವಿರೋಧಿಗಳೇನ್ನುವ ನೀವು, ಕಾನೂನು ಪದವೀದರರಾಗಿ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಿಸಿ, ಈ ಬಗ್ಗೆ ಸಿಎಂ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ವಿಧಾನಸಭೆಯಲ್ಲಿ ಹಕ್ಕು ಚ್ಯುತಿ ಮಂಡಿಸುವುದಾಗಿ ಹೇಳಿದರು.

ನಿಮ್ಮ ಗೆಲುವಿಗಾಗಿ ಶ್ರಮಿಸಿದ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್, ಅಂಬರೀಷ್, ಸತೀಶ್ ಜಾರಕಿಹೊಳೆ, ಹೆಚ್.ವಿಶ್ವನಾಥರನ್ನು ಪಕ್ಷದಲ್ಲಿ ಮೂಲೆಗುಂಪಾಗಿಸಿದ್ದೇ ನಿಮ್ಮ ಸಮಾಜವಾದವೇ ಎಂದು ಪ್ರಶ್ನಿಸಿ, ಸಿಎಂ ಆಪ್ತ ಕಾರ್ಯದರ್ಶಿ ರಾಮಯ್ಯ ವಸೂಲಿ ರಾಮಯ್ಯ ಆಗಿದ್ದಾರೆ, ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಕಲೆಕ್ಷನ್ ಕೆಂಪಯ್ಯನಾಗಿದ್ದು  ಕಲೆಕ್ಷನ್ ಇಲ್ಲದೇ ಯಾವುದೇ ಕೆಲಸ ನಡೆಯುವುದಿಲ್ಲ, ಅವರಿಬ್ಬರನ್ನು ಸಿಎಂ ಸಿದ್ದರಾಮಯ್ಯನವರ ಪರವಾಗಿ ಕೆಲಸ ಮಾಡುವರು ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿಯುದ್ದಕ್ಕೂ ಸಿಎಂ ಸಿದ್ದರಾಮಯ್ಯನವರ ಅಧಿಕಾರ ದುರುಪಯೋಗ, ಸಂವಿಧಾನ ವಿರೋಧಿ ಹಾಗೂ ಕಾನೂನು ಬಾಹಿರವಾಗಿ ನಡೆಸಿರುವ ಆಡಳಿತದ ವಿರುದ್ದ ಕೆಂಡಾಮಂಡಲವಾದ ಅವರು, ಪೊಲೀಸ್ ಇಲಾಖೆಯನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದ್ದು ನನ್ನ ಜೊತೆ ಗುರುತಿಸಿಕೊಂಡರೇ ರೌಡಿ ಶೀಟರ್ ಕೇಸು ಹಾಕಿ ಗಡಿಪಾರು ಮಾಡುವ ಬೆದರಿಕೆಯನ್ನು ಪರೋಕ್ಷವಾಗಿ ಹಾಕುತ್ತಿದ್ದು ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯು ಪರಾದರ್ಶಕವಾಗಿ ನಡೆಯುವುದಿಲ್ಲವೆಂದು ಅನುಮಾನ ವ್ಯಕ್ತಪಡಿಸಿ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.

ನಾನು ಎಂದಿಗೂ ಹೊಂದಾಣಿಕೆ ವ್ಯಕ್ತಿಯಲ್ಲ ಒಮ್ಮೆ ತೀರ್ಮಾನಿಸಿದರೇ ಎಂದಿಗೂ ಬದಲಾಯಿಸುವುದಿಲ್ಲ, ಕ್ಷೇತ್ರದ ಜನತೆ ಆಶೀರ್ವಾದ ನನ್ನ ಮೇಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ  ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ವಿದೇಶಿದಲ್ಲಿ ಹೇಗೆ ಸತ್ತ, ಅಂತ್ಯ ಸಂಸ್ಕಾರವನ್ನು ದೂರದ ಕಾಡಿನಲ್ಲಿ ಮಾಡಿದ ಉದ್ದೇಶವೇನು?, ಅವನ ಪಾರ್ಥಿವ ಶರೀರ ತರಲು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾಡಿದ ಸಹಕಾರವನ್ನು ಬಗ್ಗೆ ರಾಜ್ಯದ ಜನತೆಗೆ ಬಹಿರಂಗಗೊಳಿಸಿ ಎಂದು ತಿಳಿಸಿದರು.

ನನ್ನ ಹಣಿಯುವಲು ಮುಂದಾಗಿರುವ ಸಿಎಂ, ನನ್ನ ಮೇಲೆ ಹಾಗೂ ಮಗನ ಮೇಲೆ ಎಸಿಬಿ ಕೇಸ್ ಹಾಕಿಸಿ ಬಂಧಿಸಲು ಯತ್ನಿಸುತ್ತಿದ್ದಾರೆ, ಇಲ್ಲಿಯವರೆಗೂ ಸಂಯಮದಿಂದಲೇ ವರ್ತಿಸಿ ನಿಮ್ಮೆಲ್ಲ ಕಾರ್ಯಕ್ರಮದಲ್ಲಿ ಶಾಸಕನಾಗಿ ವೇದಿಕೆ ಹಂಚಿಕೊಳ್ಳುವ ಮೂಲಕ ನಿಮ್ಮ ಸ್ಥಾನಕ್ಕೆ ಗೌರವ ನೀಡಿರುವೆ ಆದ್ದರಿಂದ ತಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಬಂದು ಸ್ಪರ್ಧಿಸಬೇಕೆಂದು ಪಂಥಾಹ್ವಾನ ನೀಡಿದರು.

.ಗೋಷ್ಠಿಯಲ್ಲಿ ಶ್ರೀರಾಂಪುರ ಗ್ರಾ.ಪಂ ಅಧ್ಯಕ್ಷೆ ಚೂಡಾಮಣಿ, ಬೆಳವಾಡಿ ಗ್ರಾ.ಪಂ ಯ ಶಿವಮೂರ್ತಿ, ನಾಗನಹಳ್ಳಿಯ ದಿನೇಶ್, ಉದ್ಬೂರಿನ ಮಾದೇವಸ್ವಾಮಿ,ಜೆಡಿಎಸ್ ಎಸ್. ಟಿ ಘಟಕದ ರಾಜ್ಯಾಧ್ಯಕ್ಷ ದೇವರಾಜು ಇನ್ನಿತರ ಗ್ರಾ.ಪಂ. ಸದಸ್ಯರು ಶಾಸಕ ಜಿಡಿಟಿಗೆ ಸಾಥ್ ನೀಡಿದ್ದರು. ( ವರದಿ : ಕೆ.ಎಂ.ಆರ್)

Leave a Reply

comments

Related Articles

error: