ದೇಶಪ್ರಮುಖ ಸುದ್ದಿ

ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ: ನಾಲ್ವರು ಯೋಧರು ಹುತಾತ್ಮ

ಶ್ರೀನಗರ,ಫೆ.10-ಜಮ್ಮು ಮತ್ತು ಕಾಶ್ಮೀರದ ಚೆನ್ನಿ ಪ್ರಾಂತ್ಯದಲ್ಲಿರುವ ಸುಂಜವಾನ್ ಸೇನಾ ಕ್ಯಾಂಪ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರ ಸಂಖ್ಯೆ ನಾಲ್ಕಕ್ಕೇರಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಇಂದು ಮುಂಜಾನೆ 4.50 ರ ವೇಳೆಗೆ ಉಗ್ರರು ದಾಳಿ ನಡೆಸಿ ಕ್ಯಾಂಪ್ ಆವರಣದಲ್ಲಿದ್ದ ಬಂಕರ್ ಗೆ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಮೂವರು ಯೋಧರು, ಯೋಧರೊಬ್ಬರ ಪುತ್ರಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ಗಾಯಗೊಂಡ ಯೋಧರ ಪೈಕಿ ಒಬ್ಬ ಯೋಧ ಹುತಾತ್ಮರಾಗಿದ್ದರು. ಇದೀಗ ಯೋಧರ ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.

ಗಾಯಾಳುಗಳನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದ್ದು, ಸೈನಿಕರು ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕ್ಯಾಂಪ್ ನ ಆವರಣದಲ್ಲಿರುವ ಸೇನಾ ಕ್ವಾರ್ಟರ್ಸ್ ನೊಳಗೆ ನುಸುಳಿರುವ ಉಗ್ರರು ಅವಿತುಕೊಂಡಿರುವ ಸಾಧ್ಯತೆ ಇದೆ. ಕಾರ್ಯಾಚರಣೆಗೆ ಸೇನೆ ಒಂದು ಹೆಲಿಕಾಪ್ಟರ್‌, ಒಂದು ಡ್ರೋಣ್ ವಿಮಾನವನ್ನೂ ಕೂಡ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಜೈಷ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರು ದಾಳಿ ನಡೆಸಿರುವ ಶಂಕೆ ಇದ್ದು, ಸಂಸತ್ ಭವನ ಮೇಲಿನ ದಾಳಿಕೋರ ಅಪ್ಜಲ್ ಗುರು ಗಲ್ಲು ಶಿಕ್ಷೆ ವರ್ಷಾಚರಣೆ ಬ್ನೆನಲ್ಲೇ ಈ ಉಗ್ರರು ಈ ದಾಳಿ ನಡೆಸಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: