ಮನರಂಜನೆ

ಅಣ್ಣನ ಸಂಹಾರ ನೋಡಿ ಧ್ರುವ ಫುಲ್ ಖುಷ್

ಬೆಂಗಳೂರು,ಫೆ.10: ಅಭಿಮಾನಿಗಳ ಜೊತೆ ಕೂತು ಅಣ್ಣ ಸಂಹಾರ ಸಿನಿಮಾ ನೋಡಿದ ಆ್ಯಕ್ಷನ್ ಪ್ರೀನ್ಸ್ ಸಖತ್ ಖುಷಿಯಾಗಿದ್ದಾರೆ.

ಚಿರಂಜೀವಿ ಸರ್ಜಾ ಅಭಿನಯದ ಮತ್ತು ಗುರುದೇಶ್ ಪಾಂಡೆ ಕಾಂಬಿನೇಷನ್‍ನ ಸಂಹಾರ ಸಿನಿಮಾವನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ನಟ ಧ್ರುವ ಸರ್ಜಾ ವೀಕ್ಷಿಸಿದ್ದಾರೆ.  ಈ ಸಿನಿಮಾ ನೋಡಿದ್ದು ತುಂಬಾ ಖುಷಿಯಾಯಿತು. ಸಂಹಾರ ಚಿತ್ರ ನಿಜವಾಗಿಯೂ ಸಖತ್ತಾಗಿದೆ. ಗುರುದೇಶ್ ಪಾಂಡೆ ಸರ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಚಿಕ್ಕಣ್ಣ ಅವರ ನಟನೆ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ತುಂಬಾನೇ ಎಂಟರ್‍ಟೈನ್‍ಮೆಂಟ್ ಜೊತೆ ಕಾಮಿಡಿಯನ್ನು ಹೊಂದಿದೆ. ಸಂಹಾರ ಇಡೀ ಕುಟುಂಬ ನೋಡುವಂತಹ ಸಿನಿಮಾವಾಗಿದ್ದು, ಮತ್ತೊಮ್ಮೆ ನೋಡಬೇಕು ಎಂಬ ಆಸೆ ಆಗುತ್ತದೆ. ದಯವಿಟ್ಟು ಈ ಸಿನಿಮಾ ನೋಡಿ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಿಳಿಸಿದರು. ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಜೊತೆ  ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು. ( ವರದಿ: ಪಿ.ಎಸ್ )

Leave a Reply

comments

Related Articles

error: