
ಕರ್ನಾಟಕಪ್ರಮುಖ ಸುದ್ದಿ
ಹಳ್ಳದಲ್ಲಿ 10 ಲಕ್ಷ ರೂ. ಖೋಟಾ ನೋಟು ಪತ್ತೆ
ಬಾಗಲಕೋಟ (ಫೆ.12) : ಬಾಗಲಕೋಟ ನಗರದ ಹಿರೇಹಳ್ಳದಲ್ಲಿ ಎರಡು ಸಾವಿರ ಮುಖಬೆಲೆಯ 10 ಲಕ್ಷಕ್ಕೂ ಅಧಿಕ ಮೊತ್ತದ ಖೋಟಾ ನೋಟುಗಳು ಭಾನುವಾರ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಗೊರಬಾಳ ನಾಕಾ ಬಳಿ ಹಿರೇಹಳ್ಳದಲ್ಲಿ ನೋಟುಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ 2 ಸಾವಿರ ಮುಖಬೆಲೆಯ ಸುಮಾರು 10 ಲಕ್ಷಕ್ಕೂ ಅಧಿಕ ಮೊತ್ತದ ನೋಟಿನ ಕಂತೆಗಳು ದೊರೆತಿವೆ.
ಈ ನೋಟುಗಳೆಲ್ಲವೂ ಒಂದೇ ಸೀರಿಯಲ್ ನಂಬರಿನವಾಗಿದ್ದು, ಎಲ್ಲವನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಇಷ್ಟೋಂದು ಪ್ರಮಾಣದ ನೋಟುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವ್ಯವಹಾರದಲ್ಲಿ ನೋಟುಗಳು ಚಲಾವಣೆಯಾಗಿರುಬಹುದು ಎಂದು ಸ್ಥಳೀಯ ಜನತೆ ಆತಂಕಗೊಂಡಿದ್ದಾರೆ.
(ಎನ್ಬಿ)