ಸುದ್ದಿ ಸಂಕ್ಷಿಪ್ತ

ಶಿವರಾತ್ರಿ ಪ್ರಯುಕ್ತ ಸುತ್ತೂರು ಶ್ರೀಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ

ಮೈಸೂರು, ಫೆ.12:- ಸುತ್ತೂರು ಶ್ರೀಕ್ಷೇತ್ರದಲ್ಲಿ ಫೆ.13ರ ಮಹಾಶಿವರಾತ್ರಿಯಂದು ವಿಶೇಷ ಕಾರ್ಯಕ್ರಮಗಳನ್ನು ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಏರ್ಪಡಿಸಿದ್ದಾರೆ.

ನಾಳೆ ಬೆಳಿಗ್ಗೆ ಶ್ರೀಶಿವರಾತ್ರೀಶ್ವರ ಕರ್ತೃ ಗದ್ದುಗೆಗೆ, ಶ್ರೀಮಹದೇಶ್ವರ,ಶ್ರೀ ಸೋಮೇಶ್ವರ,ಶ್ರೀ ವೀರಭದ್ರೇಶ್ವರಮತ್ತು ಶ್ರೀ ನಾರಾಯಣ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಸಂಜೆ 6ರಿಂದ ಬೆಳಗಿನಜಾವ 6ರವರೆಗೆ ವಿಶೆಷ ಪೂಜೆಗಳು ನಡೆಯಲಿದೆ. ಸಂಜೆ 7ಗಂಟೆಗೆ ಶಿವದೀಕ್ಷೆಯಿದೆ. ರಾತ್ರಿ 9.30ಕ್ಕೆ ಬೆಳ್ಳಿ ರಥದ ಪ್ರಾಕಾರೋತ್ಸವವಿದೆ. ಸಂಜೆ 5ರಿಂದ ರಾತ್ರಿ 10ರವರೆಗೆ ಸುತ್ತೂರು ಜೆಎಸ್ ಎಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಭಕ್ತಿಭಾವ ಭರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10ಕ್ಕೆ ಕೀರ್ತನ ಚತುರ ವಿದ್ವಾನ್ ಎಸ್ ಆರ್. ಲಕ್ಷ್ಮಿನರಸಿಂಹನ್ ಅವರಿಂದ ಶಿವಕಥಾ ಸಂಕೀರ್ತನೆ, ರಾತ್ರಿ 12.30ಕ್ಕೆ ಮೈಸೂರಿನ ಗಾನಮಂಜರಿ ತಂಡದವರಿಂದ ಭಕ್ತಿ ಗೀತೆಗಳು,ರಾತ್ರಿ 3ಕ್ಕೆ ಮೈಸೂರು ಕಂಸಾಳೆ ಕುಮಾರಸ್ವಾಮಿ ಮತ್ತು ತಂಡದವರಿಂದ ಕಂಸಾಳೆ ಕಾರ್ಯಕ್ರಮ ಮತ್ತು ಮುಂಜಾನೆ 4.30ಕ್ಕೆ ಹೊರಳವಾಡಿಯ ಶ್ರೀಬಸವೇಶ್ವರ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮವಿದೆ. ಫೆ.15ರಂದು ಅಮಾವಾಸ್ಯೆ ವಿಶೇಷ ಪೂಜೆ ಇರಲಿದೆ.  (ಎಸ್.ಎಚ್)

Leave a Reply

comments

Related Articles

error: