ಮೈಸೂರು

ಲ್ಯಾನ್ಸ್ ಡೌನ್ ಕಟ್ಟಡಕ್ಕೆ ತಜ್ಞರ ಭೇಟಿ : ಪರಿಶೀಲನೆ

ಸಾಂಸ್ಕೃತಿಕ ನಗರಿ ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲೊಂದಾದ ಲ್ಯಾನ್ಸ್`ಡೌನ್ ಕಟ್ಟಡಕ್ಕೆ ಸರ್ಕಾರದ ನಿರ್ದೇಶನದ ಪ್ರಕಾರ ಸರ್ಕಾರಿ ಕಾಮಗಾರಿಗಳ ಗುಣಮಟ್ಟ ಭರವಸೆ ಕಾರ್ಯಪಡೆ ತಜ್ಞರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವರಾಜ ಮಾರುಕಟ್ಟೆಯ ಒಂದು ಭಾಗ ಇತ್ತೀಚೆಗೆ ಕುಸಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ದೇವರಾಜ ಮಾರುಕಟ್ಟೆಯ ಜೊತೆ ಲ್ಯಾನ್ಸ್ ಡೌನ್ ಕಟ್ಟಡ, ಮಂಡಿ ಮತ್ತು ವಾಣಿ ವಿಲಾಸ ಮಾರುಕಟ್ಟೆಗಳನ್ನು ಪುನರ್ ನಿರ್ಮಾಣ ಮಾಡಲು ಆಸಕ್ತಿ ತೋರಿದ್ದು, ತಜ್ಞರಿಂದ ಮಾಹಿತಿಯನ್ನು ಕಲೆ ಹಾಕುತ್ತಿದೆ.

ಮಂಗಳವಾರ ಲ್ಯಾನ್ಸ್ ಡೌನ್ ಕಟ್ಟಡಕ್ಕೆ ಭೇಟಿ ನೀಡಿದ ತಜ್ಞರ ತಂಡ ಕಟ್ಟಡದ ಪಾರಂಪರಿಕತೆಯನ್ನು ಉಳಿಸಿಕೊಂಡು ಹೋಗಬಹುದೇ ಅಥವಾ ಮರು ನಿರ್ಮಾಣ ಕಾರ್ಯ ನಡೆಸಬೇಕೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಕಟ್ಟಡ, ಮಣ್ಣಿನ ಮಾದರಿಯನ್ನು ಸಂಗ್ರಹಿಸಿದ್ದಾರೆ. ತಜ್ಞರಿಗೆ ಕಟ್ಟಡದ ಕುರಿತಾದ ಮಾಹಿತಿಯನ್ನು ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಬಾಬು ತಜ್ಞರಿಗೆ ನೀಡಿದ್ದಾರೆ. ವರದಿಯನ್ನು ವಾರದೊಳಗೆ ಮಹಾನಗರಪಾಲಿಕೆಗೆ ನೀಡಲಿದೆ. ನಂತರ ಪಾಲಿಕೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದು, ಮುಂದಿನ ಕ್ರಮಗಳು ನಡೆಯಲಿವೆ.

Leave a Reply

comments

Related Articles

error: