ಮೈಸೂರು

ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನಿಗೆ ಸಾರ್ವಜನಿಕರಿಂದ ಥಳಿತ

ಪಾನಪತ್ತನಾಗಿ ಯುವತಿಯರನ್ನು ಚುಡಾಯಿಸುತ್ತಿದ್ದ ಯುವಕನೋರ್ವನನ್ನು ಸಾರ್ವಜನಿಕರು ಹಿಡಿದು ಚೆನ್ನಾಗಿ ಥಳಿಸಿದ ಘಟನೆ ಮಂಗಳವಾರ ನಡೆದಿದೆ.

ಮೈಸೂರಿನ ಮರಿಮಲ್ಲಪ್ಪ ಕಾಲೇಜು ಬಳಿ ಯುವಕನೋರ್ವ ಪಾನಮತ್ತನಾಗಿ ನಿತ್ಯವೂ ಕಾಲೇಜು ವಿದ್ಯಾರ್ಥಿನಿಯರನ್ನು ಹಾಗೂ ಅದೇ ಮಾರ್ಗದಲ್ಲಿ ತೆರಳುವ ಯುವತಿಯರನ್ನು ಚುಡಾಯಿಸುತ್ತ ನಿಂತಿರುತ್ತಿದ್ದ. ಇದನ್ನು ಸಹಿಸಲಾರದ ವಿದ್ಯಾರ್ಥಿನಿಯರು ಪಾಲಕರಲ್ಲಿ ಹೇಳಿಕೊಂಡಿದ್ದರು. ಮಂಗಳವಾರ ಸಂಜೆ ಈತ ಅದೇ ರೀತಿ ವರ್ತಿಸುತ್ತಿದ್ದಾಗ ಸ್ಥಳಕ್ಕಾಗಮಿಸಿದ ಸಾರ್ವಜನಿಕರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಚಾಮುಂಡಿ ಪೊಲೀಸ್ ಪಡೆ ಯುವಕನನ್ನು ತನ್ನ ವಶಕ್ಕೆ ಪಡೆದಿದೆ.

Leave a Reply

comments

Related Articles

error: