ಕ್ರೀಡೆ

ಅಂಧರ ಕ್ರಿಕೆಟ್ ಸಂಸ್ಥೆಗೆ ಮಾನ್ಯತೆ ನೀಡಿ: ಬಿಸಿಸಿಐಗೆ ತೆಂಡುಲ್ಕರ್ ಮನವಿ

ನವದೆಹಲಿ,ಫೆ.07: ಅಂಧರ ಕ್ರಿಕೆಟ್ ಸಂಸ್ಥೆಗೆ ಮಾನ್ಯತೆ ನೀಡಿ ಪಿಂಚಣಿ ಸೌಲಭ್ಯವನ್ನು ನೀಡಬೇಕೆಂದು  ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದ್ದಾರೆ..

ಜನವರಿ 20ರಂದು ನಡೆದ ಅಂಧರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಸತತ 4 ಜಯಭೇರಿ ಬಾರಿಸಿದ ಅಂಧರ ಕ್ರಿಕೆಟ್ ತಂಡದ ಸಾಧನೆಯನ್ನು ನಾವೆಲ್ಲ ಸಂಭ್ರಮ ಪಟ್ಟಿದ್ದೇವೆ. ಇದರ ಬೆನ್ನಲ್ಲೇ ಆಟಗಾರರ ಆರ್ಥಿಕ ಪರಿಸ್ಥಿತಿಗಳ ಗಮನದಲ್ಲಿಟ್ಟುಕೊಂಡು  ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ್ ರಾಯ್’ಗೆ ಪತ್ರಬರೆದಿರುವ ತೆಂಡುಲ್ಕರ್, ಅಂಧರ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐ ಮಾನ್ಯತೆ ನೀಡಬೇಕು ಎಂದು  ಈ ಮೂಲಕ ಮನವಿ ಸಲ್ಲಿಸುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ. (ವರದಿ: ಪಿ.ಎಸ್ )

Leave a Reply

comments

Related Articles

error: