ಸುದ್ದಿ ಸಂಕ್ಷಿಪ್ತ

ಲೋಕಾಯುಕ್ತರಿಂದ ಅಹವಾಲು ಸ್ವೀಕಾರ 

ಮೈಸೂರು ಫೆ.13:- ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ಫೆಬ್ರವರಿ 14 ರಿಂದ 22 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತಾಲ್ಲೂಕು ಕೇಂದ್ರಗಳಲ್ಲಿ ಸಾರ್ವಜನಿಕರಿಂದ ದೂರು/ ಅಹವಾಲು ಸ್ವೀಕರಿಸಲಾಗುವುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಪೊಲೀಸ್ ಅಧೀಕ್ಷೆ ಜೆ.ಕೆ. ರಶ್ಮಿ ತಿಳಿಸಿದ್ದಾರೆ.

ಫೆಬ್ರವರಿ 14: ಮೈಸೂರು ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಚಾಮುಂಡಿ ಅತಿಥಿಗೃಹ, ಫೆಬ್ರವರಿ 15: ತಾಲೂಕು ಕಛೇರಿ ಆವರಣ ಮೈಸೂರು, ಫೆಬ್ರವರಿ 16: ತಾಲ್ಲೂಕು ಕಚೇರಿ ಆವರಣ, ಟಿ.ನರಸೀಪುರ ಫೆಬ್ರವರಿ 17: ಪಿಡಬ್ಲ್ಯೂಡಿ ಅತಿಥಿ ಗೃಹ ಹೆಚ್.ಡಿ.ಕೋಟೆ, ಫೆಬ್ರವರಿ 19: ಪಿಡಬ್ಲ್ಯೂಡಿ ಅತಿಥಿ ಗೃಹ ಪಿರಿಯಾಪಟ್ಟಣ, ಫೆಬ್ರವರಿ 20: ಪಿಡಬ್ಲ್ಯೂಡಿ ಅತಿಥಿ ಗೃಹ ಹುಣಸೂರು,  ಫೆಬ್ರವರಿ 21: ತಾಲ್ಲೂಕು ಕಚೇರಿ ಆವರಣ ನಂಜನಗೂಡು ಹಾಗೂ ಫೆಬ್ರವರಿ 22:  ಪಿಡಬ್ಲ್ಯೂಡಿ ಅತಿಥಿ ಗೃಹ ಕೆ.ಆರ್.ನಗರ ತಾಲ್ಲೂಕಿನಲ್ಲಿ ನಡೆಯಲಿದೆ.   ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಿಗಾಗಿ ವಿಳಂಬ, ಲಂಚದ ಬೇಡಿಕೆ ಹಾಗೂ ಇನ್ನಿತರೆ ತೊಂದರೆ ನೀಡುವ ಸರ್ಕಾರಿ ಅಧಿಕಾರಿ ನೌಕರರ ವಿರುದ್ಧ ಸಾರ್ವಜನಿಕರು ನಿಗದಿತ ಪ್ರಪತ್ರದಲ್ಲಿ ದೂರು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2521100 ನ್ನು ಸಂಪರ್ಕಿಸುವುದು. ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕೆಂದು ಅವರು ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: