ಮೈಸೂರು

ನೀರಿನ ವಿಚಾರಕ್ಕೆ ಗಲಾಟೆ : ವಾಟರ್ ಮನ್ ಗೆ ಚೂರಿ ಇರಿತ

ಮೈಸೂರು, ಫೆ.;13:- ನೀರಿನ ವಿಚಾರಕ್ಕೆ ನಡೆದ ಗಲಾಟೆ ವೇಳೆ ವಾಟರ್ ಮೆನ್ ಗೆ ಚಾಕು ಇರಿದ ಘಟನೆ  ಮೈಸೂರು ತಾಲೂಕಿನ ಬೆಲವತ್ತ ಗ್ರಾಮದಲ್ಲಿ  ನಡೆದಿದೆ.

ವಾಟರ್ ಮೆನ್ ಮಂಜುನಾಥ್ (35) ಎಂಬಾತನೇ ಚೂರಿ ಇರಿತಕ್ಕೊಳಗಾಗಿದ್ದಾನೆ. ಬೆಲವತ್ತ ಗ್ರಾಮದ ಶಿವಕುಮಾರ್ ಎಂಬಾತ ನೀರು ಬಿಡುವ ವಿಚಾರದಲ್ಲಿ ಇಬ್ಬರ ನಡುವೆ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಗಾಯಾಳು ಮಂಜುನಾಥ್  ನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಟಗಳ್ಳಿ ಠಾಣೆ ಪೊಲೀಸರು ಆರೋಪಿ ಶಿವಕುಮಾರನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: