ಮೈಸೂರು

ದೇವಾಲಯಗಳ ಹುಂಡಿ ಹಣವನ್ನು ಡಿ.31ರೊಳಗೆ ಬ್ಯಾಂಕ್‍ಗಳಿಗೆ ಜಮೆ ಮಾಡಿ: ಸರ್ಕಾರದ ಆದೇಶ

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನಗಳ ಹುಂಡಿಗಳಲ್ಲಿ ಸಂಗ್ರಹವಾಗಿರುವ ಕಾಣಿಕೆ ಹಣವನ್ನು ಕೂಡಲೇ ಬ್ಯಾಂಕ್‍ಗಳಿಗೆ ಜಮಾ ಮಾಡುವಂತೆ ಸರ್ಕಾರ ಆದೇಶಿಸಿದೆ.

ಕೇಂದ್ರ ಸರ್ಕಾರವು ಹಳೆ 500 ಹಾಗೂ ಸಾವಿರ ಮುಖಬೆಲೆಯ ನೋಟುಗಳ ಅಮಾನ್ಯಗೊಳಿಸಿದ ಹಿನ್ನೆಲೆಯಲ್ಲಿ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದ್ದು ರಾಜ್ಯದ ಎ, ಸಿ, ಬಿ ವರ್ಗದ ದೇವಾಲಯಗಳಲ್ಲಿ ಹುಂಡಿಗಳನ್ನು ತೆರೆಯುವ ಸಂದರ್ಭದಲ್ಲಿ ಬ್ಯಾಂಕ್  ಅಧಿಕಾರಿಗಳು ದೇವಾಲಯದ ಮುಖಸ್ಥರ ಸಮಕ್ಷಮದಲ್ಲಿ ಹುಂಡಿಗಳನ್ನು ತೆರೆದು ಡಿ.31ರೊಳಗೆ ಬ್ಯಾಂಕಿಗೆ ಜಮೆ ಮಾಡುವಂತೆ ಆದೇಶ ಹೊರಡಿಸಿದೆ.

‘ಎ’ ಕೆಟಗರಿ ದೇವಾಲಯಗಳಲ್ಲಿ ಪ್ರತಿದಿನ ಹುಂಡಿಯ ಹಣವನ್ನು ಬ್ಯಾಂಕ್‍ಗೆ ಜಮೆ ಮಾಡಬೇಕು, ಹುಂಡಿಯಲ್ಲಿರುವ 500 ಹಾಗು 1000 ರು. ಮುಖಬೆಲೆಯ ನೋಟುಗಳನ್ನು ಡಿ.31ರೊಳಗೆ ಬಳಗೆ ಬದಲಾಯಿಸಿಕೊಳ್ಳಬೇಕು ಇಲ್ಲವಾದಲ್ಲಿ ಆಯಾ ದೇವಸ್ಥಾನದ ಮುಖ್ಯಸ್ಥರೇ ನೇರ ಹೊಣೆಗಾರರಾಗುತ್ತಾರೆ  ಎಂದು ಧಾರ್ಮಿಕ ಇಲಾಖೆ ಆಯುಕ್ತರು ಸರ್ಕಾರದ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Leave a Reply

comments

Related Articles

error: