ಮೈಸೂರು

82,500 ಎಟಿಎಂಗಳಲ್ಲಿ ಹೊಸ ನೋಟುಗಳು ಲಭ್ಯ

ದೇಶದ ಒಟ್ಟು ಎಂಬತ್ತೆರಡು ಸಾವಿರಕ್ಕೂ ಅಧಿಕ ಎಟಿಎಂಗಳಲ್ಲಿ ಹೊಸ 500 ಹಾಗೂ 2000 ರೂ. ಮುಖಬೆಲೆಯ ನೋಟುಗಳು ಲಭ್ಯವಿದೆ.

ದೇಶಾದ್ಯಂತ 2 ಲಕ್ಷಕ್ಕೂ ಅಧಿಕ ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರ ರಚಿಸಿದ ವಿಶೇಷ ಟಾಸ್ಕ್ ಪೋರ್ಸ್ ನಿರ್ದೇಶನದಂತೆ  ಹೊಸ ನೋಟುಗಳಿಗೆ ಹೊಂದಾಣಿಕೆಯಾಗುವಂತೆ 82,500 ಎಟಿಎಂಗಳನ್ನು ಮಾರ್ಪಡಿಸಲಾಗಿದೆ. ಆರ್.ಬಿ.ಐ ಡೆಪ್ಯೂಟಿ ಗರ್ವನರ್ ಎಸ್.ಎಸ್. ಮುಂದ್ರಾ ನೇತೃತ್ವದ ಟಾಸ್ಕ್ ಪೋರ್ಸ್ ಸಲಹೆಯಂತೆ ಗ್ರಾಮೀಣ ಪ್ರದೇಶದ ಎಟಿಎಂ ಗಳಿಗೆ ಹೆಚ್ಚು ಮಹತ್ವ ನೀಡಲಾಗಿದ್ದು ನಿತ್ಯ ಹತ್ತರಿಂದ ಹನ್ನೆರಡು ಸಾವಿರದವರೆಗೂ ಎಟಿಎಂ ಮಷಿನ್‍ಗಳನ್ನು ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.  ಈಗಾಗಲೇ ಪರಿಸ್ಥಿತಿ ತಿಳಿಯಾಗಿದ್ದು ಬ್ಯಾಂಕ್‍ಗಳ ಮುಂದೆ ಜನದಟ್ಟಣೆ ಕಡಿಮೆಯಾಗಿದ್ದು ಇನ್ನೆರಡು ವಾರಗಳಲ್ಲಿ ಸಹಜ ಸ್ಥಿತಿಗೆ ಬರುವ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.

ಬಿಗ್‍ಬಜಾ಼ರ್‍ನಲ್ಲಿಯೂ ಹಣ ಡ್ರಾ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ: 10-big-bazaar1ಪೆಟ್ರೋಲ್ ಬಂಕ್‍ಗಳಲ್ಲಿ ಅಷ್ಟೇ ಅಲ್ಲ ನ.24 ರಿಂದ ಬಿಗ್ ಬಜಾರ್ ಸ್ಟೋರ್ಸ್‍ಗಳಲ್ಲಿಯೂ ಡೆಬಿಟ್/ಎಟಿಎಂ ಕಾರ್ಡ್‍ಗಳ ಮೂಲಕ ಎರಡು ಸಾವಿರ ರೂಪಾಯಿಯವರೆಗೆ ವಿಥ್ ಡ್ರಾ ಮಾಡಬಹುದಾಗಿದೆ.

ದೇಶದ ಪ್ರಮುಖ ಪಟ್ಟಣಗಳಲ್ಲಿ ಮೆಟ್ರೋ ಸಿಟಿಗಳಲ್ಲಿ ಸುಮಾರು 258 ಬಿಗ್‍ಬಜಾರ್ ಸ್ಟೋರ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ. ಸ್ಟೇಟ್ ಬ್ಯಾಂಕ್ ಇಂಡಿಯಾದ ಸಹಯೋಗದಲ್ಲಿ ಬ್ಯಾಂಕ್ ಹಣವನ್ನು ಪಿಒಎಸ್ ಮಶೀನ್ ಬಳಸುವ ಮೂಲಕ ಪಡೆಯಬಹುದು. ಯಾವ ಬ್ಯಾಂಕಿನ ಖಾತೆಯಿಂದಲೂ ಇಲ್ಲಿ ಹಣವನ್ನು ಪಡೆಯಬಹುದಾಗಿದೆ.

Leave a Reply

comments

Related Articles

error: