ಮೈಸೂರು

ಗ್ರಾಪಂಗಳಲ್ಲಿ ತಾಲೂಕು ಪಂಚಾಯಿತಿ ಸದಸ್ಯರಿಗೆ ಅವಮಾನ: ಆರೋಪ

ಗ್ರಾಮ ಪಂಚಾಯಿತಿಗಳಲ್ಲಿ ನಮಗೆ ಗೌರವ ನೀಡುತ್ತಿಲ್ಲ. ಪಿಡಿಓಗಳು ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ. ನಮ್ಮನ್ನು ಅವಮಾನಿಸುತ್ತಿದ್ದಾರೆ ಎಂದು ಮೈಸೂರು ತಾಲೂಕು ಪಂಚಾಯಿತಿಯ ಕೆಲ ಸದಸ್ಯರು ಆರೋಪಿಸಿದರು.

ಮೈಸೂರಿನ ನಜ಼ರ್‍ಬಾದ್‍ನಲ್ಲಿರುವ ಮಿನಿ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತಮ್ಮ ಅಳಲು ತೋಡಿಕೊಂಡರು. ಬೀರಿಹುಂಡಿ ಗ್ರಾಮದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆ ಸಮಯದಲ್ಲಿ ತಾಪಂ ಸದಸ್ಯರನ್ನು ಆಹ್ವಾನಿಸದೆ ಅವಮಾನ ಮಾಡಿದ್ದಾರೆ ಎಂದು ಸದಸ್ಯರಾದ ಯೋಗ ಶ್ರೀನಿವಾಸ, ಶ್ರೀಕಂಠ, ತೊಂಡೇಗೌಡ, ಕನ್ನೇಗೌಡ ಸೇರಿದಂತೆ ಹಲವು ಸದಸ್ಯರು ಆರೋಪಿಸಿದರು. ಈ ರೀತಿಯ ಅವಮಾನ ನನಗೂ ಆಗಿದೆ. ಈ ಬಗ್ಗೆ ನಂತರ ಚರ್ಚಿಸೋಣ ಎಂದು ತಾಪಂ ಉಪಾಧ್ಯಕ್ಷ ಎನ್‍.ಬಿ. ಮಂಜು ಧ‍್ವನಿಗೂಡಿಸಿದರು. ನಮ್ಮ ವ್ಯಾಪ್ತಿಯ ಗ್ರಾಪಂಗಳಲ್ಲಿ ನಮ್ಮ ಹೆಸರಿನ ನಾಮಫಲಕ ಇದ್ದು, ಅಲ್ಲಿ ಕುಳಿತುಕೊಳ್ಳಲು ಜಾಗ ಕಲ್ಪಿಸಬೇಕೆಂದು ಸದಸ್ಯರು ಆಗ್ರಹಿಸಿದರು.

ಇಒ ಲಿಂಗರಾಜಯ್ಯ ಮಾತನಾಡಿ, ತಾಪಂ ಸದಸ್ಯರು ಗ್ರಾಪಂನಲ್ಲಿ ಕೂರಲು ಅವಕಾಶ ಕಲ್ಪಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸರಕಾರ ಈ ಬಗ್ಗೆ ಕಾಯಿದೆಗೆ ತಿದ್ದುಪಡಿ ತಂದು ತೀರ್ಮಾನಿಸಬೇಕು. ಕಾಯಿದೆ ಪ್ರಕಾರ ತಾಪಂ ಸದಸ್ಯರು ಗ್ರಾಪಂಸಭೆಯಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದರು.

Leave a Reply

comments

Related Articles

error: