
ಮೈಸೂರು
ಮುಂಬರುವ ಬಜೆಟ್ ನಲ್ಲಿ ‘ವಿದ್ಯಾರ್ಥಿ ಆಯೋಗ’ದ ಘೋಷಣೆಗೆ ಒತ್ತಾಯ
ಮೈಸೂರು,ಫೆ.14 : ಶಿಕ್ಷಣ ಕ್ಷೇತ್ರದಲ್ಲಿರು ನ್ಯೂನ್ಯತೆಗಳನ್ನು ಸರಿಪಡಿಸಲು ಹಾಗೂ ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ‘ವಿದ್ಯಾರ್ಥಿಗಳ ಆಯೋಗ’ವನ್ನು ರಚಿಸಿಬೇಕೆಂದು ಸ್ಟೂಡೆಂಟ್ ವರ್ಚುವಲ್ ಬ್ರಿಗೇಡ್ ಸಂಸ್ಥಾಪಕ ಆಲಗೂಡು ಲಿಂಗರಾಜು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂಬರುವ ರಾಜ್ಯ ಬಜೆಟ್ ನಲ್ಲಿ ‘ವಿದ್ಯಾರ್ಥಿ ಆಯೋಗ ರಚಿಸಿ’ ಸಿಎಂ ಘೋಷಣೆ ಮಾಡಬೇಕೆಂದು ಒತ್ತಾಯಿಸಿ. ಜ.24ರಂದು ಬೆಂಗಳೂರಿನ ಟೌನ್ ಹಾಲ್ ಬಳಿ ಮುಷ್ಕರ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಫೆ.16ರಂದು ಮಂಡಿಸಲಿರುವ ರಾಜ್ಯ ಬಜೆಟ್ ನಲ್ಲಿ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ವಿದ್ಯಾರ್ಥಿ ಆಯೋಗವನ್ನು ಘೋಷಿಸಬೇಕು ಇಲ್ಲವಾದಲ್ಲಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ಪ್ರಗತಿಪರರ ಒಕ್ಕೂಟಗಳೊಂದಿಗೆ ರಾಜ್ಯಾಧ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯೆಯಿಂದಾಗಿ ಉಚಿತ ಪ್ರವೇಶ, ಶೂ-ವಸ್ತ್ರ, ಬಿಸಿಯೂಟ್, ಬಸ್ ಪಾಸ್ ಸೈಕಲ್, ಆರೋಗ್ಯ ಚೇತನ ಸೇರಿದಂತೆ ಸರ್ಕಾರ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿರುವ ಸಾವಿರಾರು ಕೋಟಿ ರೂಗಳ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸರ್ಕಾರ ಹಾಗೂ ಅಧಿಕಾರಿಗಳು ತ್ವರಿತವಾಗಿ ಸ್ಪಂಧಿಸುವ ನಿಟ್ಟಿನಲ್ಲಿ ‘ವಿದ್ಯಾರ್ಥಿ ಆಯೋಗ’ದ ಅವಶ್ಯವಿದ್ದು ನಮ್ಮ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಮುಂಬರುವ ಬಜೆಟ್ ನಲ್ಲಿ ಆಯೋಗವನ್ನು ಘೋಷಿಸಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದ ಅವರು, ಇಲ್ಲವಾದಲ್ಲಿ, ಸಂಸ್ಥೆಯಿಂದ ಈ ಬಗ್ಗೆ ಪ್ರತಿ ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಿದ್ದು ಪ್ರಥಮ ಹಂತದ ಜಾಗೃತಿ ಕಾರ್ಯಕ್ರಮವನ್ನು ನಗರದ ಮಹಾರಾಜ ಕಾಲೇಜು ಮೈದಾನ ಅಥವಾ ಬಯಲು ಮಂದಿರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಹೇಮಂತ್ ಕುಮಾರ್ ಜೊತೆಯಾಗಿದ್ದರು. (ವರದಿ : ಕೆ.ಎಂ.ಆರ್)