ಮೈಸೂರು

ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಹೌಸಿಂಗ್ ಫಾರ್ ಆಲ್ ಅಡಿ ನಿರ್ಮಿತ ಮನೆಗಳ ನಿರ್ಮಾಣಕ್ಕೆ ಗುದ್ದಲಿಪೂಜೆ

ಮೈಸೂರು,ಫೆ.14:- ಕೇಂದ್ರ ಸರ್ಕಾರದ ಬಡವರಿಗೆ ಮನೆ ನಿರ್ಮಾಣ ಯೋಜನೆಯಾದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಹೌಸಿಂಗ್ ಫಾರ್ ಆಲ್ ಅಡಿಯಲ್ಲಿ ಕೊಳಚೆ ನಿರ್ಮೂಲ ಮಂಡಳಿಯಿಂದ  ನಿರ್ಮಾಣಗೊಳ್ಳುತ್ತಿರುವ 650 ಮನೆಗಳಿಗೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ವಾಸು ಗುದ್ದಲಿಪೂಜೆ ನೆರವೇರಿಸಿದರು.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಜರ್ ಬಾದ್  ಜಟ್ಟಿ ಬೀದಿಯಲ್ಲಿ  ಗುದ್ದಲಿ ಪೊಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭ ಬಡಾವಣೆಯ ಪಾಲಿಕೆ ಸದಸ್ಯರು ಸೇರಿದಂತೆ ಮನೆ ನಿರ್ಮಾಣದ ಫಲಾನುಭವಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: