ಸುದ್ದಿ ಸಂಕ್ಷಿಪ್ತ

ಎನ್.ಐ.ಇ ಕಾಲೇಜು : ನಾಳೆ ಅಡುಗೆ ತ್ಯಾಜ್ಯದ ಜೈವಿಕ ಅನಿಲ ಘಟಕ ಉದ್ಘಾಟನೆ

ಮೈಸೂರು,ಫೆ.14 : ದಿ. ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಡುಗೆ ತ್ಯಾಜ್ಯದ ಜೈವಿಕ ಅನಿಲ ಘಟಕದ ಉದ್ಘಾಟನೆಯನ್ನು ಎನ್.ಐ,ಇ ಬಾಯ್ಸ್ ಹಾಸ್ಟೆಲ್ ನಲ್ಲಿ ಫೆ.15ರ ಸಂಜೆ 4 ಗಂಟೆಗೆ ಆಯೋಜಿಸಿದೆ.

ಮುಡಾ ಅಧ್ಯಕ್ಷ ಡಿ.ಧ್ರವಕುಮಾರ್ ಘಟಕವನ್ನು ಉದ್ಘಾಟಿಸುವರು, ನಂತರ ಡೈಮಂಡ್ ಜುಬಿಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಕಾಲೇಜಿನ ಉಪಾಧ್ಯಕ್ಷ ಎನ್.ರಾಮಾನುಜ ಮೊದಲಾದವರು ಭಾಗಿಯಾಗುವರು. ಸುಮಾರು 50 ಕೆ.ಜಿ ಸಾಮರ್ಥ್ಯದ ಜೈವಿಕ ಅನಿಲ ಘಟಕವು ನಾಳೆ ಚಾಲನೆ ಗೊಳ್ಳುವುದು. (ಕೆ.ಎಂ.ಆರ್)

Leave a Reply

comments

Related Articles

error: