ಸುದ್ದಿ ಸಂಕ್ಷಿಪ್ತ

ವಡ್ಡರಕೊಪ್ಪಲು ಕಂದಾಯ ಗ್ರಾಮ ರಚನೆ

ಮೈಸೂರು ಫೆ.15:-  ಕೆ.ಆರ್.ನಗರ ತಾಲೂಕಿನ ಮಿರ್ಲೆ ಹೋಬಳಿಯ ಹಳೇ ಮಿರ್ಲೆ ಕಂದಾಯ ಗ್ರಾಮದಿಂದ ಬೇರ್ಪಡಿಸಿ ವಡ್ಡರಕೊಪ್ಪಲು ಕಂದಾಯ ಗ್ರಾಮ ರಚಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಜಿಲ್ಲಾಧಿಕಾರಿಗಳು ಬೇರ್ಪಡಿಸಿದ ಗ್ರಾಮಕ್ಕೆ ಭೂ ದಾಖಲೆಗಳನ್ನು ಪ್ರತ್ಯೇಕಿಸಿ ಎರಡು ಗ್ರಾಮಗಳಿಗೆ ಆರ್.ಟಿ.ಸಿ.ರಚಿಸಲು ಅನುಮೋದನೆ ನೀಡಿರುತ್ತಾರೆ. ಮೂಲ ಗ್ರಾಮವಾದ ಹಳೇ ಮಿರ್ಲೆಯಿಂದ ಬೇರ್ಪಟ್ಟ ವಡ್ಡರಕೊಪ್ಪಲು ಹೊಸ ಕಂದಾಯ ಗ್ರಾಮಕ್ಕೆ ಒಟ್ಟು 25  ಸರ್ವೆ ನಂಬರ್‍ಗಳಿಂದ 136.15 ಎಕರೆ ವಿಸ್ತೀರ್ಣ ಕೃಷಿ ಭೂಮಿ ಗುರುತಿಸಲಾಗಿದೆ.
ಗ್ರಾಮ ಠಾಣೆಯಲ್ಲಿಯೇ ಇದ್ದ ವಡ್ಡರಕೊಪ್ಪಲು ಎಂಬ ಗ್ರಾಮವನ್ನು ವಡ್ಡರಕೊಪ್ಪಲು ಎಂದೇ ನಾಮಕರಣ ಮಾಡಿ ಘೋಷಿಸಲಾಗಿದೆ. ಭೂ ದಾಖಲೆಗಳನ್ನು ಬೇರ್ಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮೂಲ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕೃಷ್ಣರಾಜ ನಗರ ತಾಲೂಕು ತಹಸೀಲ್ದಾರ್ ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: