
ಮೈಸೂರು
ಇನ್ನೈದು ದಿನ ಮಳೆ ಇಲ್ಲ
ಮೈಸೂರು ಜಿಲ್ಲೆಯಲ್ಲಿ ನವೆಂಬರ್ 23ರಿಂದ 27ರವರೆಗೆ ಮಳೆ ಬೀಳುವ ಸಾಧ್ಯತೆ ಇಲ್ಲ ಎಂದು ನಾಗನಹಳ್ಳಿ ಸಂಶೋಧನಾ ಕೇಂದ್ರ ತಿಳಿಸಿದೆ.
ದಿನದ ಉಷ್ಣಾಂಶ 30 ರಿಂದ 31 ಡಿಗ್ರಿ ಸೆಲ್ಶಿಯಸ್, ರಾತ್ರಿಯ ಉಷ್ಣಾಂಶ 16 ರಿಂದ 18 ಡಿಗ್ರಿ ಸೆಲ್ಶಿಯಸ್ ಇರಲಿದ್ದು, ಬೆಳಗಿನ ವೇಳೆಯ ತೇವಾಂಶ 60 ರಿಂದ 70 ಪ್ರತಿಶತ ನಿರೀಕ್ಷಿಸಬಹುದು. ಮಧ್ಯಾಹ್ನದ ನಂತರದ ತೇವಾಂಶ 35 ರಿಂದ 40 ಪ್ರತಿಶತ ಇರುವ ಸಾಧ್ಯತೆ ಇದೆ. ಗಾಳಿಯ ವೇಗ ಪ್ರತಿಗಂಟೆಗೆ 2 ರಿಂದ ನಾಲ್ಕು ಕಿಲೋಮೀಟರ್.
ರೆಕ್ಕೆ ಹುಳುಗಳ ಭತ್ತದ ಗದ್ದೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ರೈತರು ಒಂದು ಲೀಟರ್ ನೀರಿಗೆ ಕ್ಲೋರೋಪೈರಿಫಸ್ 20 ಇಸಿ -2 ಎಂ.ಎಲ್. ದ್ರಾವಣವನ್ನು ಹಾಕಿ ಸಿಂಪಡಿಸಬಹುದು.