Uncategorized

ಗ್ರಾಹಕರಿಗೆ ಬಂಪರ್ ಆಫರ್: ಜಿಯೋ ಮೀರಿಸಿದ ಆಫರ್ ನೀಡಿದ ಬಿಎಸ್‍ಎನ್‍ಎಲ್‍

ನವದೆಹಲಿ (ಫೆ.15): ರಿಲಯನ್ಸ್ ಕಂಪನಿಯ ಜಿಯೋ ಡಿಜಿಟಲ್ ಸೇವೆ ಜಾರಿಗೆ ಬಂದ ಮೇಲೆ ಟೆಲಿಕಾಂ ಕಂಪನಿಗಳ ದರ ಸಮರ ಮುಂದುವರಿದಿದ್ದು, ನಾಮುಂದು ತಾಮುಂದು ಎನ್ನುವಂತೆ ಗ್ರಾಹಕರಿಗೆ ಹಲವು ಆಫರ್ ನೀಡಲಾಗುತ್ತಿದೆ.

ಇದೀಗ ಜಿಯೋಗೆ ಸೆಡ್ಡು ಹೊಡೆದಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಫ್ರೀ ಪೇಯ್ಡ್ ಗ್ರಾಹಕರಿಗೆ ಪ್ರತಿದಿನ 1 ವರ್ಷಗಳ ಕಾಲ 1 ಜಿಬಿ ಡೇಟಾ ಆಫರ್ ನೀಡಿದೆ. ಮ್ಯಾಕ್ಸಿಮಮ್ ಪ್ರೀಪೇಯ್ಡ್ ಪ್ಲಾನ್‍ನಲ್ಲಿ ಭಾರತದಲ್ಲಿರುವ ಗ್ರಾಹಕರು ಈ ಲಾಭ ಪಡೆಯಬಹುದಾಗಿದೆ.

999 ರೂ ಪ್ಲಾನ್‍ನಲ್ಲಿ 181 ದಿನಗಳ ಕಾಲ ಅನಿಯಮಿತ ವಾಯ್ಸ್ ಕಾಲ್ ಹಾಗೂ 365 ದಿನಗಳ ಕಾಲ ಪ್ರತಿದಿನ 1 ಜಿಬಿ ಡೇಟಾ ದೊರೆಯಲಿದೆ. ಆದರೆ ಈ ಪ್ಲಾನ್ ಈಶಾನ್ಯ ಭಾರತದ ಅಸ್ಸಾಂ ಮತ್ತು ಜಮ್ಮು ಕಾಶ್ಮೀರ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ, 181 ದಿನಗಳ ಕಾಲ ಉಚಿತ ವಾಯ್ಸ್ ಕಾಲ ಮಾಡಬಹುದಾಗಿದ್ದು, 182ನೇ ದಿನದಿಂದ ಪ್ರತಿ ಕರೆಗೆ 60 ಪೈಸೆ ದರ ವಿಧಿಸಲಾಗುತ್ತದೆ ಎಂದು ಬಿಎಸ್‍ಎನ್‍ಎಲ್‍ ಆಫರ್ ನೀಡಿದೆ.

(ಎನ್‍ಬಿ)

Leave a Reply

comments

Related Articles

error: