ಪ್ರಮುಖ ಸುದ್ದಿವಿದೇಶ

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸ್ಥಾನಕ್ಕೆ ಜಾಕಬ್ ಝುಮಾ ರಾಜೀನಾಮೆ

ಜೋಹಾನ್ಸ್ ಬರ್ಗ್,ಫೆ.15-ಅವಿಶ್ವಾಸ ಗೊತ್ತುವಳಿ ಎದುರಿಸುವ ಭಯ ಹಾಗೂ ತನ್ನ ಹೆಸರಿನಲ್ಲಿ ಆಫ್ರಿಕಾ ನ್ಯಾಶನಲ್ ಕಾಂಗ್ರೆಸ್(ಎಎನ್ಸಿ) ವಿಭಜನೆಯಾಗಬಾರದೆಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕಬ್ ಝುಮಾ ತಮ್ಮ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಆಡಳಿತರೂಢ ಎಎನ್ಸಿ ಝುಮಾ ಅವರಿಗೆ ಅಧಿಕಾರ ತ್ಯಜಿಸುವಂತೆ 48 ಗಂಟೆಗಳ ಗಡುವು ನೀಡಿತ್ತು. ಅದರಂತೆ ಝುಮಾ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ 9 ವರ್ಷದ ಅಧಿಕಾರವಾಧಿಯಲ್ಲಿ ಝುಮಾ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದರು.

ವಿದಾಯದ ಭಾಷಣ ಮಾಡಿದ ಝುಮಾ, ತನ್ನನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡುತ್ತಿರುವ ಎಎನ್ಸಿ ನಾಯಕತ್ವದ ನಿರ್ಧಾರವನ್ನು ನಾನು ಒಪ್ಪಲಾರೆ. ನಾನು ಯಾವಾಗಲೂ ಎಎನ್ಸಿಯ ಶಿಸ್ತಿನ ಸದಸ್ಯನಾಗಿದ್ದೆ. ಆದರೆ, ಸರ್ಕಾರದ ಆದೇಶವನ್ನು ಪಾಲಿಸುವೆ. ಹೀಗಾಗಿ ತಕ್ಷಣವೇ ಜಾರಿಗೆ ಬರುವಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.

ಎಎನ್ಸಿ ಕಳೆದ ವರ್ಷದ ಡಿಸೆಂಬರ್ ನಲ್ಲಿ ಉಪಾಧ್ಯಕ್ಷ ಸಿರಿಲ್ ರಾಮಾಫೊಸಾರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಮಂಗಳವಾರ ಝುಮಾಗೆ ಅಧ್ಯಕ್ಷ ಸ್ಥಾನದಿಂದ ಕೆಳಗಿಯುವಂತೆ ಸೂಚಿಸಿತ್ತು. ಬುಧವಾರ ತನಕ ಝುಮಾ ರಾಜೀನಾಮೆ ನೀಡಿರಲಿಲ್ಲ. ಸಂಸತ್ತಿನಲ್ಲಿ ವಿಪಕ್ಷಗಳ ಬೆಂಬಲದಿಂದ ಅವಿಶ್ವಾಸ ಗೊತ್ತುವಳಿ ಮೂಲಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂದು ಸರ್ಕಾರ ಝುಮಾಗೆ ಎಚ್ಚರಿಕೆ ನೀಡಿತ್ತು. ನನಗೆ ಅವಿಶ್ವಾಸ ಗೊತ್ತುವಳಿ ಎದುರಿಸುವ ಭಯ ಎದುರಾಗಿದೆ. ಇದರಿಂದ ನನ್ನ ಹೆಸರಿನಲ್ಲಿ ಎಎನ್ಸಿ ವಿಭಜನೆಯಾಗಬಾರದು ಎಂದು ಝುಮಾ ಹೇಳಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: