ಮೈಸೂರು

ನದಾಫ್ ಮತ್ತು ಪಿಂಜಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿರಲು ಒತ್ತಾಯ : ಪ್ರತಿಭಟನೆ

ಮೈಸೂರು,ಫೆ.15:-   ಮುಸ್ಲಿಂ ಜಾತಿಯ ಒಳಜಾತಿಯ ನದಾಫ್ ಮತ್ತು ಪಿಂಜಾರ ಜಾತಿಗಳನ್ನು ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೊರಟಿದ್ದು, ಕೂಡಲೇ ಅದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಯಿತು.

ಗುರುವಾರ ನ್ಯಾಯಾಲಯದ ಗಾಂಧಿಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ರಾಜ್ಯದಲ್ಲಿ ನಾಯಕ ಸಮಾಜವು ಒಂದು ಪ್ರಬಲ ಸಮುದಾಯವಾಗಿದ್ದು ಸುಮಾರು 70ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ರಾಜ್ಯ ಸರ್ಕಾರ ಕೇವಲ 3% ಮೀಸಲಾತಿಯನ್ನು ನೀಡಿ ಹಲವಾರು ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮೂಲಕ ಅನ್ಯಾಯವೆಸಗಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಂದು ಪಕ್ಷ ರಾಜ್ಯ ಸರ್ಕಾರ ಮುಸ್ಲಿಂ ಜಾತಿಯ ಒಳಜಾತಿಗಳಾದ ನದಾಫ್, ಮತ್ತು ಪಿಂಜರ ಜಾತಿಗಳನ್ನು ಎಸ್.ಟಿ.ಗೆ ಸೇರಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಅಂಕಿ ಅಂಶಗಳನ್ನು ಅಧಿಕೃತವಾಗಿ ಪಡೆದು ಬಜೆಟ್ ನಲ್ಲಿ ಅಧಿಕೃತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಪ್ರಯತ್ನಿಸುತ್ತಿರುವುದು ತಿಳಿದುಬಂದಿದ್ದು, ಕೈಬಿಡದಿದ್ದಲ್ಲಿ ಉಗ್ರಹೋರಾಟದ ಎಚ್ಚರಿಕೆಯನ್ನು ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಹುಣಸೂರು, ಜಿಲ್ಲಾಧ್ಯಕ್ಷ ಶ್ರೀಧರ್ ಚಾಮುಂಡಿಬೆಟ್ಟ, ನಗರಾಧ್ಯಕ್ಷ ರಾಜು ಮಾರ್ಕೆಟ್, ವಕೀಲ ಪಡುವಾರಹಳ್ಳಿ ಕೃಷ್ಣ, ಎಂ.ಶಿವಪ್ರಕಾಶ್, ಕೆರೆಹಳ್ಳಿ ಮಾದೇಶ್, ಟೆನ್ನಿಸ್ ಗೋಪಿ, ತಿಮ್ಮನಾಯಕ, ವಿನೋದ್ ನಾಗವಾಲ, ಶಿವಣ್ಣರಮ್ಮನಹಳ್ಳಿ, ಅಜಯ್ ಕೆನ್ನಾಲು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: