ಕರ್ನಾಟಕ

ವ್ಹೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ,ಕಠಿಣ ಕ್ರಮ : ಡಾ. ದಿವ್ಯಾಗೋಪಿನಾಥ್

ರಾಜ್ಯ(ತುಮಕೂರು)ಫೆ.15:- ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾಗೋಪಿನಾಥ್ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತಿದ್ದುದನ್ನು ಕೋರಾ ಠಾಣೆಯ ಪೊಲೀಸರು ಪತ್ತೆ ಮಾಡಿ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೋರಾ ಠಾಣೆ ಪಿಎಸ್ಐ ಸಿ. ರವಿಕುಮಾರ್ ಮತ್ತು ಸಿಬ್ಬಂದಿಗಳಾದ ರಘು, ಮಾಲತೇಶ್ ಮತ್ತು ಚಿದಾನಂದ್ ಅವರು ತುಮಕೂರು-ಸಿರಾ ರಾಷ್ಟ್ರೀಯ ಹೆದ್ದಾರಿ-48 ರಲ್ಲಿ ಅಜ್ಜಗೊಂಡನಹಳ್ಳಿ ವೃತ್ತದ ಬಳಿ ಕಾರ್ಯಾಚರಣೆ ನಡೆಸಿದಾಗ ವ್ಹೀಲಿಂಗ್ ಪ್ರಕರಣ ಪತ್ತೆಯಾಗಿದೆ ಎಂದರು. ನಂಬರ್ ಇಲ್ಲದ ಜ್ಯುಪಿಟರ್ ಬೈಕ್‌ಗಳಲ್ಲಿ ಅವುಗಳ ಸವಾರರು ಹೆಲ್ಮೆಟ್ ಧರಿಸದೆ, ಅತಿ ವೇಗ ಮತ್ತು ನಿರ್ಲಕ್ಷ್ಯತೆಯಿಂದ, ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತ ಇತರ ವಾಹನಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅ‌ಡಚಣೆಯಾಗದಂತೆ ಸಂಚರಿಸುತ್ತಿದ್ದುದನ್ನು ಪೊಲೀಸರು ತಡೆದಿದ್ದಾರೆ. ಸದರಿ ವಾಹನಗಳ ಸವಾರರನ್ನು ವಿಚಾರಣೆ ಮಾಡಿದಾಗ ಎಲ್ಲರೂ ತುಮಕೂರು ನಗರದ ಬಾರ್‌ಲೇನ್ ನಿವಾಸಿಗಳೆಂದು, ಅವರುಗಳ ಹೆಸರುಗಳು ಸೈಯದ್ ಅಲ್ಮಾಸ್, ಅಬ್ದುಲ್ ಖುದಾಸ್ ಮತ್ತು ಅದ್ನಾನ್ ಮಹಮದ್ ಎಂದು ಗೊತ್ತಾಗಿದೆ. ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು. ಪೊಲೀಸರು ಸಮವಸ್ತ್ರದಲ್ಲಿದ್ದರೆ ಇಂಥವರು ತಪ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಪೊಲೀಸರು ಸಾಧಾರಣ ಉಡುಪಿನಲ್ಲೇ ಕಾರ್ಯನಿರ್ವಹಿಸಿ ಇದನ್ನು ಪತ್ತೆ ಮಾಡಿದ್ದಾರೆ ಎಂದರು. ಅಪಾಯಕಾರಿ ಚಾಲನೆಯ ಚಾಲಕರುಗಳ ವಿರುದ್ಧ 18 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ಅವಧಿಯಲ್ಲಿ 50 ಪ್ರಕರಣಗಳಲ್ಲಿ 15000 ರೂ. ಸ್ಥಳ ದಂಡ ಸಂಗ್ರಹಿಸಲಾಗಿದೆ. 2017ರ ನವೆಂಬರ್ 6 ರಿಂದ 2018ರ ಫೆ. 13 ರವರೆಗೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೋ ತೆಗೆದು 515 ವಾಹನಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಇದರಲ್ಲಿ 135 ಪ್ರಕರಣಗಳಲ್ಲಿ ದಂಡ ಪಾವತಿಯಾಗಿದೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: