ದೇಶಪ್ರಮುಖ ಸುದ್ದಿ

ಕಾಂಗ್ರೆಸ್ ನ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆಯೇ ಸಚಿನ್ ಪೈಲಟ್..?

ದೇಶ(ನವದೆಹಲಿ)ಫೆ.15:- ಗುಜರಾತ್ ಮತ್ತು ರಾಜಸ್ತಾನ್ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸಂಜೀವಿನಿ ದೊರೆತಂತಾಗಿದೆ. ಇದರ ನಂತರ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬಹುದೇ ಎಂಬ ಚರ್ಚೆಗಳೆದ್ದಿವೆ.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿಗೆ ಜನ ಮನಸೋತಿದ್ದು, ಬಿಜೆಪಿ ಸುಲಭವಾಗಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನಲಾಗುತ್ತಿತ್ತು. ಆದರೆ ಗುಜರಾತ್ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಸಂಕಷ್ಟವನ್ನೆದುರಿಸುತ್ತಿದೆ ಎನ್ನಲಾಗುತ್ತಿದ್ದು, ಗೆಲುವು ಸುಲಭವಲ್ಲ. ಇದಕ್ಕೂ ಮೊದಲು ಬಿಜೆಪಿ ಉತ್ತರಪ್ರದೇಶ, ಗುಜರಾತ್, ರಾಜಸ್ತಾನ್, ಮಧ್ಯಪ್ರದೇಶ, ಛತ್ತೀಸ್ ಗಢ, ಬಿಹಾರಗಳಲ್ಲಿ ಅತ್ಯಧಿಕ ಸೀಟುಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ ಈ ಬಾರಿ ರಾಜಸ್ತಾನ್, ಮಧ್ಯಪ್ರದೇಶ, ಛತ್ತೀಸ್ ಗಢ ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಲ್ಲಿಯೂ ಚುನಾವಣೆ ನಡೆಯಲಿದೆ. ರಾಜಸ್ಥಾನ್ ದ ಉಪಚುನಾವಣೆ ಫಲಿತಾಂಶಗಳು ಕೂಡ ಈ ಬಾರಿ ಬಿಜೆಪಿ ಗೆಲುವು ಸುಲಭವಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿದ್ದರೆ ಕಾಂಗ್ರೆಸ್ ನೇರ ಲಾಭ ಪಡೆಯಲಿದೆ. ಬಿಜೆಪಿ 60 ಸೀಟುಗಳನ್ನು ಕಳೆದುಕೊಳ್ಳಲಿದೆ. ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಾರದು. ಇದರ ನೇರ ಲಾಭ ಕಾಂಗ್ರೆಸ್ ಗೆ  ಲಭಿಸಲಿದ್ದು, ಮತ್ತೆ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಲಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಬದಲಾಗುತ್ತಿರುವ ಪರಿಸ್ಥಿತಿಯ ರಾಜಕೀಯ ಲಾಭವನ್ನು ಪಡೆಯಲು ಕಾಂಗ್ರೆಸ್ ಸಿದ್ಧವಾಗಿದೆಯೇ, ಕಾಂಗ್ರೆಸ್ ಏನು ಮಾಡಬೇಕು ಎಂಬ ಪ್ರಶ್ನೆಗಳೆದ್ದಿದ್ದು, ಇಂಗ್ಲಿಷ್ ಅಂಕಣಕಾರ ಚೇತನ್ ಭಗತ್ ಪತ್ರಿಕೆಯೊಂದರಲ್ಲಿ ಈ ಕುರಿತು ಅಂಕಣ ಬರೆದಿದ್ದಾರೆ. ಅದರಲ್ಲಿ ರಾಹುಲ್ ಗಾಂಧಿಯ ಬದಲು ಯುವ ನಾಯಕ ಸಚಿನ್ ಪೈಲಟ್ ನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ಅತ್ಯುತ್ತಮ ಆಯ್ಕೆಯಾಗಬಹುದು ಎಂದಿದ್ದಾರೆ. ಸಚಿನ್ ಪೈಲಟ್ ರಾಜಸ್ಥಾನದ ಕಾಂಗ್ರೆಸ್ ರಾಜ್ಯಾಧ್ಯಕ್ಷನಾಗಿದ್ದು, ರಾಹುಲ್ ಗಾಂಧಿಗೆ ಹೋಲಿಸಿದರೆ ಯುವನಾಯಕರಾಗಿದ್ದಾರೆ. ಸಚಿನ್ ನಾಯಕತ್ವದಲ್ಲಿ ರಾಹುಲ್ ಗೆಲುವು ಸಾಧಿಸಿದರೆ ಅದು ಕಾಂಗ್ರೆಸ್ ಗೆ ದೊಡ್ಡ ವಿಷಯ. ಹೊಸ ಮುಖ. ಯುವ ನೇತಾರ. ಜನಸಾಮಾನ್ಯರೊಂದಿಗೆ ಸುಲಭವಾಗಿ ಬೆರೆಯುತ್ತಾರೆ. ರಾಹುಲ್ ಮತ್ತು ಸಚಿನ್ ಇಬ್ಬರೂ ಜೊತೆಯಾದರೆ ಅದ್ಭುತವಾಗಲಿದೆ ಎಂದಿದ್ದಾರೆ ಚೇತನ್ ಭಗತ್.  (ಎಸ್.ಎಚ್)

Leave a Reply

comments

Related Articles

error: