ಮನರಂಜನೆ

‘ಬಾಹುಬಲಿ-2’ ಚಿತ್ರದ ಯುದ್ಧದ ದೃಶ್ಯಾವಳಿ ಲೀಕ್

ಬಹು ನಿರೀಕ್ಷಿತ ‘ಬಾಹುಬಲಿ-2’ ಚಿತ್ರದ ಮೇಕಿಂಗ್ ವಿಡಿಯೋ ಕದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಚಿತ್ರದ ನಿರ್ಮಾಪಕ ಮಂಗಳವಾರದಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

‘ಬಾಹುಬಲಿ’ ಚಿತ್ರವು 2015ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿ ತೀವ್ರ ಸಂಚಲನವನ್ನು ಮೂಡಿಸಿತ್ತು. ಸುಮಾರು 9 ನಿಮಿಷಗಳ ಯುದ್ಧದ ದೃಶ್ಯಗಳು ಲೀಕ್ ಆಗಿದ್ದು, ಗ್ರಾಫಿಕ ಡಿಸೈನ್‍ ಕೆಲಸಕ್ಕಾಗಿ ಈ ದೃಶ್ಯಗಳನ್ನು ಅನ್ನಪೂರ್ಣ ಸ್ಟುಡಿಯೋಸ್‍ಗೆ ನೀಡಲಾಗಿದ್ದು, ಅಲ್ಲಿಂದಲೇ ವಿಡಿಯೋ ಲೀಕ್ ಆಗಿದೆ ಎಂದು ನಿರ್ಮಾಪಕರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಫಿಕ್ ಡಿಸೈನರ್ ಕೃಷ್ಣ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಲೀಕ್‍ ಆದ ದೃಶ್ಯಗಳು ಚಿತ್ರದಲ್ಲಿ ಮುಖ್ಯವಾಗಿದ್ದು, ದುಬಾರಿ ಸೆಟ್‍ನಲ್ಲಿ ಇದರ ಚಿತ್ರೀಕರಣ ಮಾಡಲಾಗಿತ್ತು ಎನ್ನಲಾಗಿದೆ. ಒಟ್ಟು 12 ನಿಮಿಷಗಳ ದೃಶ್ಯವನ್ನು ಎಡಿಟಿಂಗ್‍ಗಾಗಿ ನೀಡಲಾಗಿದ್ದು, ಇದರಲ್ಲಿ ಕೃಷ್ಣ 9 ನಿಮಿಷದ ವಿಡಿಯೋವನ್ನು ಕದ್ದಿದ್ದಾನೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೃಷ್ಣನಿಗೆ ಸೇರಿದ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‍ ಅನ್ನು ಪರಿಶೀಲಿಸಿದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

comments

Related Articles

error: