ಮೈಸೂರು

ಸಂಚರಿಸಲಿದೆ ಮೊಬೈಲ್ ಲೈಬ್ರರಿ

ಮಕ್ಕಳ ಮೇಲೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ದೈಹಿಕ ಮತ್ತು ಮಾನಸಿಕ ಒತ್ತಡದ ನಿಮಿತ್ತ ಅವರ ಮನಸ್ಸಿನ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲು ಚೈಲ್ಡ್ ಫಂಡ್ ಇಂಡಿಯಾ ಮೊಬೈಲ್ ಲೈಬ್ರರಿಯನ್ನು ಪರಿಚಯಿಸಿದ್ದು, ಮೈಸೂರು ನಗರದಾದ್ಯಂತ ಸಂಚರಿಸಲಿದೆ.

ಮೈಸೂರಿನ ಸಿಲ್ಕ್ ಫ್ಯಾಕ್ಟರಿ ವೃತ್ತದ ಬಳಿ ಬುಧವಾರ ಮೊಬೈಲ್ ಲೈಬ್ರರಿಯನ್ನು ಸ್ವಾಗತಿಸಲಾಯಿತು. ಈ ಸಂದರ್ಭ ಮಹಾನಗರಪಾಲಿಕೆ ಸದಸ್ಯ ಸುನಿಲ್, ಲಕ್ಷ್ಮಣ ಪ್ರಭು, ಫಾ. ಮಾರ್ಟಿನ್ ಎಂ, ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಮೈಸೂರು ತಾಲೂಕಿನಾದ್ಯಂತ ಅನೇಕ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡು ಕಳೆದ ಮೂವತ್ತನ್ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಪುಟ್ಟ ಕುಟುಂಬ ಕಲ್ಯಾಣ ಕೇಂದ್ರವು ಚೈಲ್ಡ್ ಫಂಡ್ ಇಂಡಿಯಾ ಜೊತೆ ಕೈ ಜೋಡಿಸಿದೆ.

ಗುಣಮಟ್ಟದ ಕಲಿಕೆಯತ್ತ ಮಕ್ಕಳನ್ನು ಸೆಳೆಯುವುದೇ ಇದರ ಉದ್ದೇಶವಾಗಿದ್ದು,  ಮೊಬೈಲ್ ಗ್ರಂಥಾಲಯ ಅಥವಾ ಚಾಲನ ಗ್ರಂಥಾಲಯವನ್ನು ಮೈಸೂರಿನ ಅನೇಕ ಕಡೆಗಳಲ್ಲಿ ಪರಿಚಯಿಸುತ್ತಿದೆ. ಓದಲು ಬಯಸುವ ಮಕ್ಕಳಿಗೆ ಈ ಗ್ರಂಥಾಲಯ ತುಂಬಾ ಸಹಕಾರಿಯಾಗಲಿದೆ.

Leave a Reply

comments

Related Articles

error: