ಕ್ರೀಡೆಮೈಸೂರು

ನೆಟ್‍ಬಾಲ್, ಪ್ಲೋರ್‍ಬಾಲ್ ಪಂದ್ಯಾವಳಿ: ಶೇಷಾದ್ರಿಪುರಂ, ಗಾವಡಗೆರೆ ಸರ್ಕಾರಿ ಕಾಲೇಜು ತಂಡಗಳಿಗೆ ಜಯ

ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ನೆಟ್ ಬಾಲ್ ಹಾಗೂ ಫ್ಲೋರ್ ಬಾಲ್ ಪಂದ್ಯಾವಳಿಗಳು ಈಚೆಗೆ ಜರುಗಿದವು.

ನೆಟ್ ಬಾಲ್: ಬಾಲಕಿಯರ ವಿಭಾಗದಲ್ಲಿ ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು ತಂಡವು ಟೆರೇಷಿಯನ್ ಪದವಿಪೂರ್ವ ಕಾಲೇಜು ತಂಡದ ವಿರುದ್ಧ ಸೆಣಸಾಡಿ 6-4 ಅಂಕಗಳಿಂದ ಜಯಗಳಿಸಿದೆ. ಬಾಲಕರ ವಿಭಾಗದಲ್ಲಿ ಗಾವಡಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು ತಂಡವು ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು ತಂಡವನ್ನು ಮಣಿಸಿ 8-5 ಅಂಕಗಳಿಂದ ಜಯಗಳಿಸಿದೆ.

ಪ್ಲೋರ್ ಬಾಲ್: ಬಾಲಕರ ವಿಭಾಗದಲ್ಲಿ ಶೇಷಾದ್ರಿಪುರಂ ಕಾಲೇಜು ತಂಡವು ಮೈಸೂರಿನ ಎಸ್.ಆರ್.ಕೆ.ವಿ.ಎಸ್. ಕಾಲೇಜಿನ ತಂಡವನ್ನು 2-1 ಪಾಯಿಂಟ್‍ಗಳಿಂದ ಸೋಲಿಸಿದೆ. ಬಾಲಕಿಯರ ವಿಭಾಗದಲ್ಲಿ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು ತಂಡವು ಮೈಸೂರಿನ ಟೆರೇಷಿಯನ್ ಕಾಲೇಜು ತಂಡವನ್ನು 1-0 ಅಂಕಗಳಿಂದ ಮಣಿಸಿದೆ.

ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ನಾಗರಾಜ ಅವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಶೇಷಾದ್ರಿಪುರಂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರಘು, ಎಸ್.ಆರ್.ಕೆ.ವಿ.ಎಸ್. ಕಾಲೇಜಿನ ಸುದರ್ಶನ್, ಟೆರೆಷಿಯನ್ ಪದವಿ ಪೂರ್ವ ಕಾಲೇಜಿನ ಆಂಟನಿ ಮೋಸಸ್ ಉಪಸ್ಥಿತರಿದ್ದರು.

wollyball-sports-web-20160903_164847

Leave a Reply

comments

Related Articles

error: