ದೇಶಪ್ರಮುಖ ಸುದ್ದಿ

ರೈತರು, ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡಲು ಕೇಂದ್ರದಿಂದ ಕೆಲ ಕ್ರಮಗಳ ಘೋಷಣೆ

500 ಮತ್ತು 1000 ರು. ನೋಟುಗಳ ಅಮಾನ್ಯದಿಂದ ದೇಶಾದ್ಯಂತ ಜನರಲ್ಲಿ ಸೃಷ್ಟಿಯಾಗಿರುವ ಕೆಲವು ಗೊಂದಲಗಳನ್ನು ನಿವಾರಿಸಲು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಕಾಂತ ದಾಸ್ ಅವರು ಬುಧವಾರ ಕೆಲ ಕ್ರಮಗಳನ್ನು ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಈ ದಿಢೀರ್ ನಿರ್ಧಾರದ ವಿರುದ್ಧ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಹೀಗಾಗಿ ಸರಕಾರವು ರೈತರು ಮತ್ತು ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವುದನ್ನು ಗಮನದಲ್ಲಿಟ್ಟುಕೊಂಡು ಕೆಲ ಕ್ರಮಗಳನ್ನು ಜಾರಿ ಮಾಡಲು ನಿರ್ಧರಿಸಿದೆ. ರೈತರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ 21 ಕೋಟಿ ರು. ಗಳನ್ನು ಮಂಜೂರು ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ಬ್ಯಾಂಕ್‍ಗಳು ಸಹಕಾರಿ ಬ್ಯಾಂಕುಗಳಿಗೆ ನೀಡಿರುವ ನಿರ್ದೇಶನಂದತೆ ಸಹಕಾರಿ ಬ್ಯಾಂಕುಗಳು ರೈತರಿಗೆ ಹಣ ಪೂರೈಸುತ್ತವೆ ಎಂದರು.

ಡೆಬಿಟ್‍ ಕಾರ್ಡ್‍ಗಳ ಬಳಕೆ ಮೇಲೆ ಡಿಸೆಂಬರ್ 31 ರ ವರೆಗೆ ಯಾವುದೇ ಶುಲ್ಕ ಇರುವುದಿಲ್ಲ. ಡಿಜಿಟಲ್ ಫೈನಾನ್ಶಿಯಲ್ ವ್ಯವಹಾರಗಳ ಶುಲ್ಕವನ್ನೂ ರದ್ದು ಮಾಡಲಾಗಿದೆ. ಹಾಗಾಗಿ ದೇಶಾದ್ಯಂತ 82 ಸಾವಿರ ಎಟಿಎಂಗಳ ಸಾಮರ್ಥ್ಯ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 31 ರ ವರೆಗೆ ರೈಲ್ವೆ ಆನ್‍ಲೈನ್‍ ಟಿಕೆಟ್ ಬುಕಿಂಗ್ ಸೇವಾ ತೆರಿಗೆ ಕಡಿತಗೊಳಿಸಲಾಗಿದೆ. ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಡಿಜಿಟಲ್ ಪೇಮೆಂಟ್ ಮಾಡಬೇಕು. ಪೇಟಿಎಂ ಮತ್ತು ಇತರ ವ್ಯಾಲೆಟ್‍ಗಳ ನಗದು ಮಿತಿ 20 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಹಿಂಗಾರು ಋತುವಿನ ಕೃಷಿ ಚಟುವಟಿಕೆಗಳಿಗಾಗಿ ನಬಾರ್ಡ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳಿಗೆ 23 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದು, ಅಗತ್ಯಬಿದ್ದಲ್ಲಿ ಇನ್ನಷ್ಟು ಹಣ ಮಂಜೂರು ಮಾಡಲಿದೆ ಎಂದರು.

Leave a Reply

comments

Related Articles

error: