ದೇಶಪ್ರಮುಖ ಸುದ್ದಿಮೈಸೂರು

ಕಾವೇರಿ ಅಂತಿಮ ತೀರ್ಪು ಪ್ರಕಟ; ಕರ್ನಾಟಕಕ್ಕೆ 14.75 ಟಿಎಂಸಿ ಹೆಚ್ಚುವರಿ ನೀರು, ನೀರಾವರಿ ಜಮೀನು ಹೆಚ್ಚಿಸಲು ಅನುಮತಿ

ಕಾವೇರಿ ವಿವಾದದ ಇತಿಹಾಸದಲ್ಲೇ ಮೊದಲ ಬಾರಿ ಕರ್ನಾಟಕದ ಪರವಾಗಿ ಬಂದ ತೀರ್ಪು! ಅನ್ಯಾಯದ ಗಾಯಕ್ಕೆ ಮುಲಾಮು!

ನವದೆಹಲಿ (ಫೆ.16): ಕರ್ನಾಟಕ-ತಮಿಳುನಾಡು ಮಧ್ಯೆ ಇರುವ ಕಾವೇರಿ ವಿವಾದದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸಿದ್ದು, ಕರ್ನಾಟಕ್ಕೆ 14.5 ಟಿಎಂಸಿ ಅಡಿ ಹೆಚ್ಚುವರಿ ನೀರು ನೀಡಿದೆ. ಇದರ ಜೊತೆಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಸದ್ಯಕ್ಕೆ ತಡೆಹಿಡಿದಿದೆ.

ಇಷ್ಟೇ ಅಲ್ಲದೆ ಕರ್ನಾಟಕ 1920ರ ಒಪ್ಪಂದದಲ್ಲಿ ಅವಕಾಶವಿರುವಷ್ಟು ನೀರಾವರಿ ಜಮೀನು ವಿಸ್ತರಿಸಲೂ ಸಹ ಸುಪ್ರೀಂ ಕೋರ್ಟ್ ಅನುಮತಿ ನೀಡಿರುವುದು ಇಂದಿನ ತೀರ್ಪು ಕರ್ನಾಟಕ್ಕೆ ಸ್ವಲ್ಪ ಸಮಾಧಾನ ತಂದುಕೊಟ್ಟಿದೆ.

ಇದೇ ವೇಳೆ ನ್ಯಾಯಾಲಯವು ಕಾವೇರಿ ನದಿ ಪಾತ್ರದ ರಾಜ್ಯಗಳಿಗೆ ಕಿವಿಮಾತು ಹೇಳಿದ್ದು, “ನೀರು ಹಂಚಿಕೆಯಲ್ಲಿ ಸಮಾನ ಹಂಚಿಕೆ ಸೂತ್ರ ಪಾಲಿಸಬೇಕು. ನದಿಗಳು ರಾಷ್ಟ್ರೀಯ ಸಂಪತ್ತು, ಯಾವುದೇ ರಾಜ್ಯದ ಸಂಪತ್ತಲ್ಲ” ಎಂದಿದೆ.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠದ ತೀರ್ಪು ಓದಿದ ಮುಖ್ಯನ್ಯಾಯಮೂರ್ತಿ ದೀಪಕ್‍ ಮಿಶ್ರಾ ಅವರು, ನೀರು ಹಂಚಿಕೆಯಲ್ಲಿ ನ್ಯಾಯಾಧಿಕರಣ ಪಾಲಿಸಿದ ಕ್ರಮ ಸರಿಯಾಗಿದೆ. ತನ್ನ ಪಾಲಿನ ನೀರಿಗಾಗಿ ಕರ್ನಾಟಕ ಸಂವಿಧಾನದತ್ತವಾದ ಚೌಕಾಸಿ ಮಾಡುವ ಹಕ್ಕು ಪಡೆದಿದೆ. ನೀರು ನಿರ್ವಹಣಾ ಮಂಡಳಿ ರಚನೆಯ ಹಕ್ಕು ಸಂಸತ್ತಿಗೆ ಸೇರಿದ್ದು ಎನ್ನುವ ಮೂಲಕ ಕರ್ನಾಟಕಕ್ಕೆ ಇಷ್ಟು ವರ್ಷಗಳಲ್ಲಿ ಆಗಿರುವ ಅನ್ಯಾಯದ ಗಾಯಕ್ಕೆ ಮುಲಾಮು ಹಚ್ಚುವ ಮಾತುಗಳನ್ನು ಆಡಿದರು.

(ಎನ್‍ಬಿ)

Leave a Reply

comments

Related Articles

error: