ಮೈಸೂರು

ದೇಶದ ಆರ್ಥಿಕ ಸ್ಥಿರತೆಗೆ ಜಿಎಸ್‍ಟಿ ಅನಿವಾರ್ಯ: ಎಸ್.ರಾಜಕುಮಾರ್ ಅಭಿಮತ

ಕೇಂದ್ರ ಸರ್ಕಾರ ದೇಶದಲ್ಲಿ ಏಕರೂಪ ಸೇವಾ ತೆರಿಗೆ ಪದ್ಧತಿಯನ್ನು ಅಳವಡಿಸಲಿದ್ದು ಇದರಿಂದ ರಾಜ್ಯ ಸರ್ಕಾರಗಳ ತೆರಿಗೆ ಸಂಗ್ರಹದಲ್ಲಿ ಕುಂಠಿತವಾಗುವುದು ಎಂದು ಮೈಸೂರು ವಲಯದ, ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಹೆಚ್ಚುವರಿ ಆಯುಕ್ತ ಎಸ್.ರಾಜಕುಮಾರ್ ತಿಳಿಸಿದರು.
ಅವರು ಬುಧವಾರ ಮಹಾರಾಣಿ ಕಲಾ ಕಾಲೇಜಿನ ವಾಣಿಜ್ಯ ಮತ್ತು ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಆಯೋಜಿಸಿದ್ದ “ಜಿಎಸ್‍ಟಿ-ಅವಲೋಕನ” ವಿಚಾರ ಸಂಕಿರಣದಲ್ಲಿ ಮಾತನಾಡಿ, ರಾಜರಾಳ್ವಿಕೆ ಕಾಲದಿಂದಲೂ ತೆರಿಗೆ ಪದ್ಧತಿಯಿತ್ತು. ಬ್ರಿಟಿಷರು ಆಳ್ವಿಕೆಯಲ್ಲಿ ಉಪ್ಪು, ತಂಬಾಕು ಹಾಗೂ ಎಣ್ಣೆಯ ಮೇಲೆ ತೆರಿಗೆ ವಿಧಿಸಿದ್ದು,  ಇದರಿಂದ ಕ್ರಾಂತಿಯೇ ನಡೆದಿತ್ತು ಎಂದು ತಿಳಿಸಿದರು.
ಅವರು ಮುಂದುವರೆದು, ಆದಾಯ ಮತ್ತು ಸೇವಾ ತೆರಿಗೆಯೂ ದೇಶದ ಮೂಲಭೂತ ಅಭಿವೃದ್ಧಿಗೆ ಅನಿವಾರ್ಯವಾಗಿದೆ. ಪರೋಕ್ಷ ಹಾಗೂ ನೇರ ರೂಪದಲ್ಲಿ ತೆರಿಗೆಗಳನ್ನು ಪ್ರತಿಯೊಬ್ಬರು ಪಾವತಿಸುತ್ತಿದ್ದೇವೆ. ಉತ್ಪಾದಕರು ಕೇಂದ್ರ ಸರಕು ಸುಂಕ ಹಾಗೂ ಮಾರಾಟಗಾರರು ಸೇವಾ ಸುಂಕದ ರೂಪದಲ್ಲಿ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಆದಾಯ ತೆರಿಗೆ ವಿಭಿನ್ನವಾಗಿದ್ದು ಪ್ರತಿಯೊಬ್ಬರಿಗೂ ಅವರವರ ಆದಾಯದನುಸಾರ ನೇರ ತೆರಿಗೆಯನ್ನು ಸರ್ಕಾರವೇ ಹೇರುತ್ತಿದೆ. ಪ್ರತಿ ವರ್ಷಕ್ಕೆ ಸುಮಾರು 15 ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಹಣವೂ ಕೇಂದ್ರಕ್ಕೆ ಸಂಗ್ರಹವಾಗುತ್ತಿದೆ. ಬ್ಯಾಂಕಿಂಗ್ , ರಿಯಲ್ ಎಸ್ಟೇಟ್ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಸೇವಾ ತೆರಿಗೆಯನ್ನು ಪರೋಕ್ಷವಾಗಿ ಪ್ರತಿಯೊಬ್ಬರು ಪಾವತಿಸುತ್ತಿದ್ದೇವೆ. 5 ಲಕ್ಷ ಕೋಟಿ ರೂಪಾಯಿ ಆದಾಯ ತೆರಿಗೆ ಮತ್ತು 2 ಲಕ್ಷ ಕೋಟಿ ರೂಪಾಯಿ ಉತ್ಪನ್ನಗಳ ಸುಂಕದ ರೂಪದಲ್ಲಿ ತೆರಿಗೆ ಸಂಗ್ರಹವಾಗುತ್ತಿದೆ.
ಪ್ರತಿ ರಾಜ್ಯಗಳಲ್ಲೂ ತೆರಿಗೆ ಸಂಗ್ರಹದಲ್ಲಿ ವಿಭಿನ್ನತೆ ಇದ್ದು ಏಕರೂಪ ತೆರಿಗೆ ಪದ್ಧತಿಯಿಂದ ರಾಜ್ಯ ಸರ್ಕಾರಗಳ ಆದಾಯಕ್ಕೆ ಕತ್ತರಿ ಬೀಳುವುದರಿಂದ ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕವು ವಿರೋಧ ವ್ಯಕ್ತಪಡಿಸಿವೆ. ವಿದೇಶಿ ನೇರ ಬಂಡವಾಳದಾರರಿಗೆ ಅನುಕೂಲ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆ ತರಲು ಕೇಂದ್ರವು ಜಿಎಸ್ಟಿಯನ್ನು ಅಳವಡಿಸಲು ಕೇಂದ್ರವು ಉತ್ಸುಕರಾಗಿದ್ದು ರಾಜ್ಯ ಸರ್ಕಾರಗಳ ಆದಾಯ ಮೂಲವಾದ ತಂಬಾಕು, ಅಬಕಾರಿ ಹಾಗೂ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ಟಿ ವ್ಯಾಪ್ತಿಗೊಳಪಟ್ಟಿಲ್ಲ. ಜಿಎಸ್ಟಿ ಕೌನ್ಸಿಲ್ ಅನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ತೆರಿಗೆ ಮೇಲೆ ಹಿಡಿತವನ್ನು ಕೇಂದ್ರ ಸರ್ಕಾರ ಕಳೆದುಕೊಳ್ಳುವುದು. ತಂತ್ರಜ್ಞಾನ ಸಹಾಯದಿಂದ ವ್ಯವಹಾರದ ಮಾಹಿತಿಯೂ ಪಾರದರ್ಶಕತೆಯಿಂದ ಕೂಡಿರುವುದು, ದೇಶದ ಆರ್ಥಿಕ ಸ್ಥಿರತೆಗೆ ಜಿಎಸ್ಟಿಞ ಅನಿವಾರ್ಯ ಹಾಗೂ ಅವಶ್ಯವಾಗಿದೆ ಎಂದು ತಿಳಿಸಿದರು.
ತೆರಿಗೆಯ ಸಂಗ್ರಹದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ದೊರೆಸ್ವಾಮಿ, ಉಪನ್ಯಾಸಕರಾದ ಡಾ.ಪುಟ್ಟರಾಜ್, ಪ್ರೊ.ಸುನಿಲ್, ಪ್ರೊ.ಪುಟ್ಟರಾಜು, ಡಾ.ರೇಶ್ಮಾ ಚೆಂಗಪ್ಪ ಉಪಸ್ಥಿತರಿದ್ದರು. ಪೂರ್ಣಿಮಾ ಪ್ರಾರ್ಥಿಸಿದರು, ಪೂಜಾ ಎಸ್.ಪೈ ಸ್ವಾಗತಿಸಿದರು, ಡಾ.ಬಸ್ರತ್ ಸುಲ್ತಾನ್ ನಿರೂಪಿಸಿದರು.

Leave a Reply

comments

Related Articles

error: