ಮೈಸೂರು

‘ವಿಶ್ವಗುರು ಬಸವಣ್ಣನವರು’ ಕೃತಿ ಬಿಡುಗಡೆ ನ.25 ರಂದು

ವೆಂಕಟಗಿರಿ ಪ್ರಕಾಶನದ ವತಿಯಿಂದ ನ.25 ರಂದು ದಶಮಾನೋತ್ಸವ ಸಮಾರಂಭಗಳ ಉದ್ಘಾಟನೆ ಮತ್ತು ಮೈಸೂರು ವಿವಿ ಬಸವ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ.ಚಂದ್ರಶೇಖರಯ್ಯ ಅವರ ‘ವಿಶ್ವಗುರು ಬಸವಣ್ಣನವರು’ ಕೃತಿ ಬಿಡುಗಡೆ ಮಾಡಲಾಗುತ್ತದೆ ಎಂದು ವೆಂಕಟಗಿರಿ ಪ್ರಕಾಶನದ ಸಂಸ್ಥಾಪಕ ಪ್ರೊ.ನೀ.ಗಿರಿಗೌಡ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11.15 ಕ್ಕೆ ಶಂಕರಮಠ ರಸ್ತೆಯ ಶ್ರೀ ನಟರಾಜ ಸಭಾಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ನಟರಾಜ ಪ್ರತಿಷ್ಠಾನದ ಅಧ್ಯಕ್ಷ ನಟರಾಜ ಮಹಾಸ್ವಾಮಿ ಉದ್ಘಾಟಿಸಲಿದ್ದಾರೆ. ಸಂತಫಿಲೋಮಿನಾ ಕಾಲೇಜಿನ ಪ್ರೊ.ಎಂ.ಕೃಷ್ಣೇಗೌಡ ಕೃತಿ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪನಿರ್ದೇಶಕ ದಾಸೇಗೌಡ್ರು, ಸಾಹಿತಿ ವಿದ್ಯಾಸಾಗರಕದಂಬ ಮತ್ತು ಶ್ರೀದೇವಿ ಸಾಂಸ್ಕೃತಿಕ ಇಲಾಖೆಯ ಅಧ‍್ಯಕ್ಷ ಸೋಮಶೇಖರ್ ಹಾಜರಿದ್ದರು.

Leave a Reply

comments

Related Articles

error: