ಕರ್ನಾಟಕ

ಮೂರನೇ ಬಾರಿಯೂ ಹೆಣ್ಣೇ ಹುಟ್ಟಿತೆಂದು ತಾಯಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ, ಫೆ.16: ಮೂರನೇ ಬಾರಿಯೂ ಹೆಣ್ಣೇ ಹುಟ್ಟಿತೆಂದು ಮನನೊಂದ ತಾಯಿ ಮಕ್ಕಳೊಡನೆ ತಾನು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ದಾರುಣ ಘಟನೆ ಗುಡಿ ಬಂಡೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಗಂಗರಾಜು ಪತ್ನಿ ನಾಗ ಶ್ರೀ(30) ಎಂಬುವರು ಮಕ್ಕಳಾದ ನವ್ಯಶ್ರೀ (5) ದಿವ್ಯಶ್ರೀ (2) ಹಾಗೂ ಎರಡು ತಿಂಗಳ ಮಗುವನ್ನು ಮೊದಲು ಬಾವಿಗೆ ತಳ್ಳಿ ನಂತರ ತಾನೂ ಬಾವಿಗೆ ಜಿಗಿದು ನಿನ್ನೆ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋದರ ಮಾವನನ್ನೇ ಮದುವೆಯಾಗಿದ್ದ ನಾಗಶ್ರೀ ಹೆಣ್ಣುಮಕ್ಕಳೇ ಇರುವುದರಿಂದ ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ತನ್ನ ಮನೆ ನೆರೆ ಹೊರೆಯವರ ಬಳಿ ನೋವು ತೋಡಿಕೊಂಡು,ಸಾಯುವ ಮಾತುಗಳನ್ನಾಡಿದ್ದರು. ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ( ವರದಿ; ಪಿ.ಎಸ್)

Leave a Reply

comments

Related Articles

error: