ಮೈಸೂರು

ಆರ್ ಐ ಇ ಅಂತರ ವಿಶ್ವವಿದ್ಯಾಲಯ ಕೇಂದ್ರದ ಉದ್ಘಾಟನೆ ಫೆ.17

ಮೈಸೂರು,ಫೆ.16 : ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯು ಶಿಕ್ಷಕ ಶಿಕ್ಷಣಕ್ಕಾಗಿ ಅಂತರ ವಿಶ್ವ ವಿದ್ಯಾನಿಲಯ ಕೇಂದ್ರ ಸ್ಥಾಪಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ ಅನುಮತಿ ನೀಡಿದ್ದು, ದಕ್ಷಿಣ ಭಾರತದ ವಿದ್ಯಾಲಯ ಇದಾಗಿದ್ದು ಪೆ.17ರ ಮಧ್ಯಾಹ್ನ 3ಕ್ಕೆ ಇದರ ಶಂಕುಸ್ಥಾಪನೆ ನೆರವೇರಲಿದೆ ಎಂದು ಪ್ರಾಚಾರ್ಯ ಪ್ರೊ. ಯಜ್ಞಮೂರ್ತಿ ಶ್ರೀಕಾಂತ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣದಲ್ಲಿ ಗುಣಾತ್ಮಕ ಸುಧಾರತಣೆ ತರಲು, ವೃತ್ತಿಪೂರ್ವ ಹಾಗೂ ವೃತ್ತಿ ನಿರತ ಶಿಕ್ಷಕರ ಅಭಿವೃದ್ಧಿಯ ಅಗತ್ಯತೆಗಳನ್ನು ಪೂರೈಸುವ ವೇದಿಕೆಯಾಗಿ ದಕ್ಷಿಣ ರಾಜ್ಯಗಳಲ್ಲಿ  ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಕೇಂದ್ರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಅನಿಲ್ ಸ್ವರೂಪ್ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದು, ಎನ್‌ಸಿಇಆರ್‌ಟಿ ನಿರ್ದೇಶಕ ಪ್ರೊ. ಹೃಷಿಕೇಶ್ ಸೇನಾಪತಿ ಅಧ್ಯಕ್ಷತೆ ವಹಿಸಲಿದ್ದಾರೆ , ಈ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಮೂರು ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಇದಲ್ಲದೆ, ಸಂಸ್ಥೆಯ ಆವರಣದಲ್ಲಿ ಶನಿವಾರ ಮತ್ತು ಭಾನುವಾರ ಶಿಕ್ಷಕರ ಶಿಕ್ಷಣಕ್ಕಾಗಿನ ಅಂತರ ವಿವಿ ಕೇಂದ್ರ ಕೇಂದ್ರದ ದೃಷ್ಟಿಕೋನ ಮತ್ತು ಕಾರ್ಯಗಳು ಕುರಿತ ಚಿಂತನಾ ಕಾರ್ಯಾಗಾರ ಸಹಾ ಆಯೋಜಿಸಲಾಗಿದ್ದು ದೇಶದ  ವಿವಿಧ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಣ ತಜ್ಞರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಕಾರ್ಯಾಗಾರದಲ್ಲಿ ಭಾಗಿಯಾಗುವರು ಎಂದು ಮಾಹಿತಿ ನೀಡಿದರು.

ಪ್ರೊ. ಗೋಪಾಲ್, ಎಚ್. ಜನಾರ್ಧನ್, ನಾಗರಾಜು, ಸೋಮಶೇಖರ್, ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: