ಮೈಸೂರು

ಪೂರ್ಣ ಪ್ರಮಾಣದ ಬಜೆಟ್ ಅಲ್ಲ ಎಂದ್ರು ಪ್ರತಾಪ್ ಸಿಂಹ : ಸಾಲಗಾರರ ಬಜೆಟ್ ಅಂದ್ರು ಮಾಜಿ ಸಚಿವ ರಾಮದಾಸ್

ಪ್ರವಾಸೋದ್ಯಮವನ್ನು ನಿರ್ಲಕ್ಷ್ಯಿಸಲಾಗಿದೆ ಎಂದ್ರು ರಾಜೇಂದ್ರ

ಮೈಸೂರು,ಫೆ.16:- ಇದು ಸಿದ್ದರಾಮಯ್ಯರವರ ಕಡೆಯ ಬಜೆಟ್.ಇದು ಪೂರ್ಣ ಪ್ರಮಾಣದ ಬಜೆಟ್ ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರ ಕಳೆದ ನಾಲ್ಕು ವರ್ಷದಿಂದ ರಾಜಕೀಯ ಮಾಡುತ್ತಿದೆ. ಬಜೆಟ್ ಬಗ್ಗೆ ಜನರು ನಿರೀಕ್ಷೆ ಇಟ್ಟುಕೊಳ್ಳಬೇಡಿ. ಇದು ಜನರ ಕಣ್ಣೊರೆಸುವ ಬಜೆಟ್ ಅಷ್ಟೆ. ಮುಂದಿನ ವರ್ಷ ಯಡಿಯೂರಪ್ಪ ಬಂದು ಬಜೆಟ್ ಮಂಡಿಸುತ್ತಾರೆ ಜನ ಅದನ್ನು ನಂಬಿ ಎಂದರು.ನಂತರ ಮಾಜಿ ಸಚಿವ ರಾಮದಾಸ್ ಮಾತನಾಡಿ ಇದು ಬಜೆಟ್ ಅಲ್ಲವೇ ಅಲ್ಲ.ಇದು ಸಾಲಗಾರರ ಬಜೆಟ್ ಆಗಿದೆ.ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದಾರೆ‌. ಆ ಮೂಲಕ ಜಾತಿ ರಾಜಕಾರಣ ಮಾಡಿದ್ದಾರೆ.ಇದು ಎಲ್ಲರ ಮೂಗಿಗೂ ತುಪ್ಪ ಸವರುವ ಬಜೆಟ್ ಎಂದರು. ಬಜೆಟ್‌ನಲ್ಲಿ ಪ್ರವಾಸೋದ್ಯಮವನ್ನು ನಿರ್ಲಕ್ಷ್ಯಿಸಲಾಗಿದೆ. ಸುಮಾರು 50 ಲಕ್ಷ ಜನರನ್ನು ಇವರು ಪರಿಗಣನೆಗೆ ತೆಗೆದುಕೊಂಡಿಲ್ಲ. ಲಕ್ಷಾಂತರ ಅವಿದ್ಯಾವಂತರು ಕೆಲಸ ಮಾಡುವ ಉದ್ಯಮವೆಂದರೇ ಅದು ಹೋಟೆಲ್.ಪ್ರವಾಸೋದ್ಯಮಕ್ಕೆ ಕಳೆದ ಬಾರಿಗಿಂತ ಕಡಿಮೆ ಹಣ ನೀಡಿದ್ದಾರೆ. ಕಡೆಯ ಬಜೆಟ್‌ನಲ್ಲಿ ಇನ್ನಷ್ಟು ಯೋಜನೆ ರೂಪಿಸಬಹುದಿತ್ತು. ಆದರೆ ಈ ಬಜೆಟ್ ನಿರಾಸೆ ತಂದಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾಜೇಂದ್ರ ಬೇಸರ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: