ಮೈಸೂರು

ಪರೀಕ್ಷಾ ಒತ್ತಡ : ಪ್ರಧಾನಿ-ವಿದ್ಯಾರ್ಥಿಗಳ ಸಂವಾದ ವೀಕ್ಷಿಸಿದ ಜೆಎಸ್ ಎಸ್ ಕಾಲೇಜಿನ ವಿದ್ಯಾರ್ಥಿಗಳು

ಮೈಸೂರು-16: ಯುಜಿಸಿ ಧನಸಹಾಯ ಆಯೋಗದ ಜಂಟಿ ನಿರ್ದೇಶಕರ ನಿರ್ದೇಶನದಂತೆ ಶುಕ್ರವಾರ  ನಗರದ ಬಿ.ಎನ್. ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳನ್ನು  ಉದ್ದೇಶಿಸಿ ಪರೀಕ್ಷಾ ಒತ್ತಡ ಮತ್ತು ಪರೀಕ್ಷೆ ತೆಗೆದುಕೊಳ್ಳುವ ವಿಷಯ ಕುರಿತು ದೂರದರ್ಶನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದ ನೇರ ವೀಕ್ಷಣೆಯನ್ನು ಏರ್ಪಡಿಸಲಾಗಿತ್ತು.

ಕಾಲೇಜಿನ  ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ದೊಡ್ಡಸ್ಕ್ರೀನ್ ಹಾಗೂ ಪ್ರೊಜೆಕ್ಟರ್ ಮೂಲಕ ವ್ಯವಸ್ಥೆ ಮಾಡಲಾಗಿದ್ದ ಈ ಕಾರ್ಯಕ್ರಮವನ್ನು ವಿವಿಧ ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ವೀಕ್ಷಿಸಿದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ ಬಿ.ವಿ. ಸಾಂಬಶಿವಯ್ಯ ಹಾಗೂ ಪ್ರಭಾರ ಪ್ರಾಚಾರ್ಯ ಪ್ರೊ. ಡಿ.ಎಸ್. ಸದಾಶಿವಮೂರ್ತಿಯವರು ಉಪಸ್ಥಿತರಿದ್ದರು. (ಜಿ.ಕೆ.ಎಸ್.ಎಚ್)

Leave a Reply

comments

Related Articles

error: