ಮೈಸೂರು

ಫೆ. 25 : ಕೊಲಂಬಿಯಾ ಏಷಿಯಾ ಆಸ್ಪತ್ರೆ ವತಿಯಿಂದ ಜೀವ ಉಳಿಸಲು ದಾರಿ ಬಿಡಿ 10ಕೆ ಸವಾಲಿನ ಓಟ

ಮೈಸೂರು, ಫೆ.16: ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆ,ಸ್ಪೋರ್ಟ್ಸ್ ಆ್ಯಂಡ್ ಬಿಯಾಂಡ್ ಸಹಯೋಗದೊಂದಿಗೆ ‘ಜೀವ ಉಳಿಸಲು ದಾರಿಬಿಡಿ’ಎಂಬ ಧ್ಯೇಯವಾಕ್ಯದೊಂದಿಗೆ 10ಕೆ ಸವಾಲಿನ ಓಟವನ್ನುಫೆಬ್ರವರಿ 25, ಆಯೋಜಿಸಿದೆ. ರಸ್ತೆಗಳಲ್ಲಿ ಆ್ಯಂಬುಲೆನ್ಸ್ ಗಳಿಗೆ ದಾರಿಬಿಟ್ಟು ಕೊಡುವುದರ ಕುರಿತು ಜನರ ಅರಿವನ್ನು ಹೆಚ್ಚಿಸುವುದು ಮತ್ತು ಅವರನ್ನು ಸುಶಿಕ್ಷಿತರನ್ನಾಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಒಲಿಂಪಿಯನ್ ಒ.ಪಿ.ಜೈಶಾ ಅವರು ಕೊಲಂಬಿಯಾ ಏಷಿಯಾ 10ಕೆ ಸವಾಲಿನ ಓಟದ ಒಂದು ಭಾಗವಾಗಲಿದ್ದಾರೆ.  ರಸ್ತೆಗಳಲ್ಲಿ ಆ್ಯಂಬುಲೆನ್ಸ್ ಗಳಿಗೆ ದಾರಿ ನೀಡುವ ಬಗ್ಗೆ ಜನಜಾಗೃತಿ ಹೆಚ್ಚಿಸುವ ಮತ್ತು ಅವರನ್ನು ಶಿಕ್ಷಿತರನ್ನು ಮಾಡುವ ಈ ಆಂದೋಲನದಲ್ಲಿ ಅಥ್ಲಿಟ್  ಒ.ಪಿ.ಜೈಶಾ ಅವರು ಕೊಲಂಬಿಯಾ ಏಷಿಯಾ ಆಸ್ಪತ್ರೆಯೊಂದಿಗೆ ಕೈಜೋಡಿಸಿದ್ದಾರೆ.

“ಮೈಸೂರು ನಗರದ ಪ್ರಧಾನ ಆರೋಗ್ಯ ರಕ್ಷಣಾ ಸಂಸ್ಥೆಯಾಗಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆ ಈ ಸಾಮಾಜಿಕ ಜಾಗೃತಿ ಅಭಿಯಾನವನ್ನು ಆರಂಭಿಸಲು ಸಂತೋಷಪಡುತ್ತಿದೆ ಮತ್ತು ಇದು ಮೈಸೂರಿನ ನಾಗರಿಕರಲ್ಲಿ ದೊಡ್ಡನಿಯತ್ತು ಮೂಡಿಸುತ್ತದೆ ಎಂಬುದರಲ್ಲಿ ನಮಗೆ ಅನುಮಾನವಿಲ್ಲ. ಇದರ ಆರಂಭದೊಂದಿಗೆ ನಾವು ಎಲ್ಲರಲ್ಲೂ ಕೇಳಿಕೊಳ್ಳುವುದೆಂದರೆ, ಆ್ಯಂಬುಲೆನ್ಸ್ ಕುರಿತ ನಮ್ಮ ವರ್ತನೆ ಸೂಕ್ಷ್ಮವಾಗಿರಲಿ, ಅದನ್ನುಮೊದಲು ಮುಂದೆಸಾಗಲು ಬಿಡೋಣ, ಮತ್ತು ನಮ್ಮ ಧ್ಯೇಯವಾಕ್ಯಕ್ಕೆ ಬೆಂಬಲವಾಗಿ ಈ ಜಾಗೃತಿಯನ್ನು ಇನ್ನಷ್ಟು ಹರಡೋಣ,”ಎಂದು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರ ವಿಶೇಷಜ್ಞ ಡಾ.ಉತ್ತಪ್ಪ ಮತ್ತು ನರ ಶಸ್ತ್ರಚಿಕಿತ್ಸಕ ಮಕ್ಸೂದ್ ತಿಳಿಸಿದ್ದಾರೆ.

ಲಿಂಕ್:http://mysuru.10kchallengerun.com/ ಅಥವಾ ನಿಮ್ಮ ನೋಂದಾವಣೆಯನ್ನು ಖಚಿತಪಡಿಸಿಕೊಳ್ಳಲು https://www.townscript.com/e/mysore-10k-challengerun040021 ಅಥವಾ 8884655366ಕ್ಕೆ ಕರೆಮಾಡಬಹುದು. ಫೆಬ್ರವರಿ 18 ರ ಒಳಗಾಗಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ.  ಹೆಚ್ಚಿನಮಾಹಿತಿಗಾಗಿ ಫರಾಝ್ ಮೊಹಮ್ಮದ್ಇಸ್ಮಾಯಿಲ್ +91 8884655366, ಮಮತಾ ವಸಂತ್/ಲಾವಣ್ಯ ವೆಂಕಟೇಶ್ 9739021345 / 9902242957 ಅವರನ್ನು ಸಂಪರ್ಕಿಸಬಹುದು.

Leave a Reply

comments

Related Articles

error: