ಕ್ರೀಡೆಪ್ರಮುಖ ಸುದ್ದಿ

ವಿಶ್ವ ಟೆನ್ನಿಸ್ ರ್ಯಾಂಕಿಂಗ್: ರೋಜರ್ ಫೆಡರರ್ ನಂ.1

ರೋಟರ್ಡಮ್,ಫೆ.17-ಸಿಂಗಲ್ಸ್ ನಲ್ಲಿ 20 ಬಾರಿ ಗ್ರಾನ್‌ಸ್ಲಾಮ್‌ ಚಾಂಪಿಯನ್ ಆಗಿರುವ ರೋಜರ್ ಫೆಡರರ್ ವಿಶ್ವ ಟೆನ್ನಿಸ್ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೆ ತಲುಪಿದ್ದಾರೆ.

ರೋಟರ್ಡಮ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಹಾಲೆಂಡ್ ನ ರಾಬಿನ್ ಹಾಸೆ ಅವರನ್ನು 4-6, 6-1, 6-1 ಸೆಟ ಗಳಿಂದ ಮಣಿಸಿ ಸೆಮಿಫೈನಲ್ಸ್ ತಲುಪಿದ ರೋಜರ್ ಫೆಡರರ್ ವಿಶ್ವ ರ್ಯಾಂಕಿಂಗ್ ನಲ್ಲಿ ಸ್ಪೇನ್ನ ರಫೆಲ್ ನಡಾಲ್ ರನ್ನು ಹಿಂದಿಕ್ಕಿ ನಂ.1 ಸ್ಥಾನ ತಲುಪಿದ್ದಾರೆ.

ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಫೆಡರರ್ ಆಯಂಡ್ರೆ ಅಗಾಸ್ಸಿ ದಾಖಲೆಯನ್ನು ಮುರಿದಿದ್ದಾರೆ. 2003ರಲ್ಲಿ ಅಗಾಸ್ಸಿ ತನ್ನ 33ನೇ ಹರೆಯದಲ್ಲಿ ಅಗ್ರಸ್ಥಾನಕ್ಕೇರಿದ ಸಾಧನೆ ಮಾಡಿದ್ದರು. ಫೆಡರರ್ 2012ರ ಅಕ್ಟೋಬರ್ ಬಳಿಕ ನಂ.1 ಸ್ಥಾನಕ್ಕೆ ವಾಪಸಾಗಿದ್ದಾರೆ. 2004ರ ಫೆಬ್ರವರಿಯಲ್ಲಿ ಮೊದಲ ಬಾರಿ ಅಗ್ರ ಸ್ಥಾನ ತಲುಪಿದ್ದರು.

ನಂ.1 ಸ್ಥಾನಕ್ಕೇರುವುದು ಟೆನಿಸ್ನಲ್ಲಿನ ಮಹತ್ವದ ಸಾಧನೆ. ನಮಗೆ ವಯಸ್ಸಾಗಿದ್ದರೆ ಅಗ್ರಸ್ಥಾನಕ್ಕೇರಲು ಹೆಚ್ಚು ಶ್ರಮಿಸಬೇಕಾಗುತ್ತದೆ. 1998ರಲ್ಲಿ ಮೊದಲ ಬಾರಿ ವೈಲ್ಡ್ಕಾರ್ಡ್ ಪಡೆದು ಟೆನಿಸ್ ಗೆ ಪ್ರವೇಶಿಸಿದ ನನ್ನ ವೃತ್ತಿಜೀವನ ಸುದೀರ್ಘವಾದುದು. ಇದೀಗ ನನ್ನ ಕನಸು ನನಸಾಗಿದೆ ಎಂದು ಫೆಡರರ್ ಪ್ರತಿಕ್ರಿಯಿಸಿದ್ದಾರೆ. (ವರದಿ-ಎಂ.ಎನ್)

 

Leave a Reply

comments

Related Articles

error: