ಮೈಸೂರು

ಕುರುಚಲು ಕಾಡಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು : ಭರದಿಂದ ಸಾಗಿದ ಬೆಂಕಿ ಆರಿಸುವ ಕಾರ್ಯ

ಮೈಸೂರು,ಫೆ.17:- ನಂಜನಗೂಡಿನ ಅರಣ್ಯ ಪ್ರದೇಶದ ಕುರುಚಲು ಕಾಡಿನಲ್ಲಿ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದ್ದು, ಬೆಂಕಿ ಪ್ರದೇಶವೆಲ್ಲ ಆವರಿಸಿ ಪ್ರಾಣಿಗಳು ಕಂಗಾಲಾದ ಘಟನೆ ನಡೆದಿದೆ.

ಕೋಣನೂರು ಕಿರು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದುಷ್ಕರ್ಮಿಗಳ ಕುಕೃತ್ಯಕ್ಕೆ ನೂರಾರು ಎಕರೆ ಕುರುಚಲು ಕಾಡು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಕಡವೆ, ಜಿಂಕೆ ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳು ಕಂಗಾಲಾಗಿವೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಕುರುಚಲು ಹುಲ್ಲಿನ ಜೊತೆಗೆ ಕೆಲ ಮರಗಳೂ ಕೂಡ ಬೆಂಕಿಗಾಹುತಿಯಾಗಿವೆ. ನಿನ್ನೆಯಿಂದ ನಿರಂತರವಾಗಿ ಬೆಂಕಿ ಉರಿಯುತ್ತಿದ್ದು,ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: