
ಮೈಸೂರು
‘ಮೈಸೂರು-ಕೇರಳ’ ರೈಲ್ವೆ ಯೋಜನೆ ವಿರುದ್ಧ ಹೋರಾಟ ಗಂಭೀರವಾಗಲಿ
ಮೈಸೂರು,ಫೆ.17 : ‘ಮೈಸೂರಿನಿಂದ ಕೇರಳ ರಾಜ್ಯ ಸಂಪರ್ಕದ ಉದ್ದೇಶಿತ ರೈಲ್ವೆ ಹಾಗೂ ಹೆದ್ದಾರಿ ಯೋಜನೆಯ ವಿರುದ್ಧ ಗಂಭೀರ ಹೋರಾಟ ನಡೆಸಿ ಕೊಡಗಿನ ವಿಶಿಷ್ಠ ಪರಿಸರವನ್ನು ರಕ್ಷಿಸಬೇಕಾಗಿದೆ.
ಯೋಜನೆ ಅನುಷ್ಠಾನಗೊಂಡರೇ ಕಾವೇರಿ ಹಾಗೂ ಕೊಡಗಿನ ಪ್ರದೇಶದಲ್ಲಿ ಹಲವು ಜೀವ ವೈವಿಧ್ಯತೆಗಳಿಗೆ ಹಾಗೂ ಪರಿಸರಕ್ಕೆ ಅಪಾರ ಪ್ರಮಾಣದ ಹಾನಿಯಾಗಲಿದ್ದು ಈ ಯೋಜನೆ ವಿರೋಧಿಸಿ ಫೆ.18ರಂದು ನಡೆಸುತ್ತಿರುವ ‘ಕೊಡಗು ಏಗೆನ್ಷಟ್ ರೈಲ್ವೆ’ ಪ್ರತಿಭಟನೆಗೆ ರೈತ ಸಂಘಟನೆಗಳು, ಪ್ರಗತಿಪರರು, ಸಾಮಾಜಿಕ ಚಿಂತಕರು, ಪರಿಸರವಾದಿಗಳು ಸೇರಿ ರೈಲ್ವೇ ವಿರುದ್ಧದ ಕೊಡುಗು ಹೋರಾಟಕ್ಕೆ ಬೆಂಬಲಿಸಿವೆ.
ಕೇವಲ ಗುತ್ತಿಗೆದಾರರು ಮತ್ತು ಕೇರಳಿಗರಿಗಾಗಿ ತೆರಿಗೆದಾರರಿಂದ ಸಂಗ್ರಹವಾದ ಸಂಪನ್ಮೂಲವನ್ನು ತೊಡಗಿಸಿ ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು ಹೊರಟಿರುವ ಕಾಮಗಾರಿಗಳಿ, ಪರಿಸರವನ್ನು ರಕ್ಷಿಸಬೇಕಾದ ಸರ್ಕಾರ ಬೇಜವಾಬ್ದಾರಿ ತೋರಿದೆ, ಜನಪ್ರತಿನಿಧಿಗಳು ನಿರ್ಲಕ್ಷ್ಯೆ ಧೋರಣೆಯು ಖಂಡನೀಯವಾಗಿದೆ.
ಪ್ರತಿಭಟನೆ ಉದ್ದೇಶ ಈಡೇರುವವರೆಗೂ ಹೋರಾಟ ನಡೆಸುವುದು ಎಲ್ಲರ ಕರ್ತವ್ಯವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ಮೂಲಕ ಹೋರಾಟವನ್ನು ಜನಪರಗೊಳಿಸುವ ಮೂಲಕ ಕೊಡಗಿನ ಪರಿಸರವನ್ನು ರಕ್ಷಿಸೋಣವೆಂದು ಎಂದು, ಎನ್.ಬಿ.ಆರಾಧ್ಯ ಮತ್ತು ಮರಳ್ಳಿ ಮಾದಪ್ಪ ಕರೆ ನೀಡಿದ್ದಾರೆ. (ಕೆ.ಎಂ.ಆರ್)