ಕರ್ನಾಟಕಪ್ರಮುಖ ಸುದ್ದಿ

ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ : ನಟ ಪ್ರಕಾಶ್ ರೈ

ರಾಜ್ಯ(ಬೆಂಗಳೂರು)ಫೆ.17:- ಪ್ರಸ್ತುತ ದೇಶದ ವಿದ್ಯಮಾನಗಳನ್ನು ಗಮನಿಸಿದರೆ, ಚುನಾವಣೆಯಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ನಗರದಲ್ಲಿಂದು ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಎಸ್ ಎಫ್‌ಐ ಆಯೋಜಿಸಿದ್ದ ’ಶಾಂತಿಯ ಧ್ವನಿ’ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಜನಪ್ರತಿನಿಧಿಗಳ ಮೇಲೆ ಇಟ್ಟು ಕೊಂಡಿರುವ ನಂಬಿಕೆಗಳು ಹುಸಿಯಾಗುತ್ತಿದೆ.ಹೀಗಾಗಿ, ಚುನಾವಣೆಯಲ್ಲಿಯೇ ಒಳ್ಳೆಯ ಹಾಗೂ ನಮ್ಮ ನೋವಿಗೆ ಧ್ವನಿ ಯಾಗುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.ಇದು ಪ್ರತಿಯೊಬ್ಬರ ಹೊಣೆ ಎಂದು ಕರೆ ನೀಡಿದರು. ಯುವ ಜನತೆಗೆ ದೇಶವನ್ನು ಬದಲಿಸುವ ಹಾಗೂ ಪ್ರಜಾಪ್ರಭುತ್ವ ಉಳಿಸುವ  ಶಕ್ತಿಯಿದೆ.ತಪ್ಪು ದಾರಿಯಲ್ಲಿ ನಡೆಯುವ ಬದಲು ಒಳ್ಳೆಯ ಪ್ರಜೆಯಾಗಿ ಯುವಕರು ರೂಪಗೊಳ್ಳಬೇಕು ಎಂದು ನುಡಿದರು. ಎಸ್‌ಎಫ್ ಐ ಅಖಿಲ ಭಾರತ ಅಧ್ಯಕ್ಷ ವಿ.ಪಿ.ಸಾನು ಮಾತನಾಡಿ, ಕೇಂದ್ರದಲ್ಲಿರುವ ಮೋದಿ ಸರ್ಕಾರ ಪ್ರತಿ ವರ್ಷ ಬರೋಬ್ಬರಿ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿತ್ತು.ಆದರೆ, ಇದೀಗ ಅದು ಹುಸಿಯಾಗಿದ್ದು, ಎಲ್ಲೆಡೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಮುಖ್ಯ ನ್ಯಾಯಮೂರ್ತಿ ಎಲ್.ಗೋಪಾಲ ಗೌಡ, ಎಸ್ ಎಫ್‌ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಸಿಂಗ್, ಜೆಎನ್ ಯು ವಿದ್ಯಾರ್ಥಿ ನೀತಿಶ್ ನಾರಾಯಣ್, ಎಸ್ ಎಫ್‌ಐ ರಾಜ್ಯಾಧ್ಯಕ್ಷ ಅಂಬರೀಶ್, ಪ್ರಧಾನ ಕಾರ್ಯದರ್ಶಿ ಗುರುರಾಜ್ ದೇಸಾಯಿ ಸೇರಿ ಪ್ರಮುಖರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: