
ದೇಶಪ್ರಮುಖ ಸುದ್ದಿ
ಕ್ಯಾರೆಟ್ ಹಲ್ವ ತಿಂದು 105 ಮಂದಿ ಅಸ್ವಸ್ಥ
ಪಾಲಘರ್,ಫೆ.19-ಮದುವೆ ಮನೆಯಲ್ಲಿ ಕ್ಯಾರೆಟ್ ಹಲ್ವ ತಿಂದು 105 ಮಂದಿ ಅಸ್ವಸ್ಥರಾಗಿರುವ ಘಟನೆ ಪಾಲಘರ್ ಜಿಲ್ಲೆಯಲ್ಲಿ ನಡೆದಿದೆ.
ಮದುವೆ ಮನೆಯಲ್ಲಿ ಮಾಡಿದ್ದ ಕ್ಯಾರೆಟ್ ಹಲ್ವ ತಿಂದ 105 ಮಂದಿಗೆ ತಲೆ ಸುತ್ತು ಬಂದು ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣ ಇವರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಹಿ ತಿಂಡಿ ವಿಷಾಹಾರವಾಗಿ ಪರಿವರ್ತಿತವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕ್ಯಾರೆಟ್ ಹಲ್ವವನ್ನು ಆಹಾರ ಮತ್ತು ಔಷಧ ಪ್ರಯೋಗಾಲಯದ ಅಧಿಕಾರಿಗಳು ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ಈ ತನಕ ಯಾವುದೇ ಕೇಸು ದಾಖಲಿಸಿಕೊಂಡಿಲ್ಲ. ಆದರೆ ತನಿಖೆ ಜಾರಿಯಲ್ಲಿದೆ ಎನ್ನಲಾಗಿದೆ. (ವರದಿ-ಎಂ.ಎನ್)