
ಮೈಸೂರು
ನಾಳೆ ಅಂತರ ಕಾಲೇಜು ಭಾಷಣ ಸ್ಪರ್ಧೆ
ಮೈಸೂರು,ಫೆ.19 : ಹೆಣ್ಣು ಮಕ್ಕಳಲ್ಲಿ ಭಾಷಣ ಕಲೆಯನ್ನು ವೃದ್ಧಿಸುವ ಸಲುವಾಗಿ ಮಹಾರಾಣಿ ಮಹಿಳಾ ಕಲಾ ಕಾಲೇಜು, ಮಾನವಿಯ ಮಹಿಳಾ ಸೇವಾ ಟ್ರಸ್ಟ್, ಹಿರಿಯ ವಿದ್ಯಾರ್ಥಿನಿಯರ ಸಂಘ ಸಂಯುಕ್ತವಾಗಿ ‘ಮಹಿಳಾ ಸಬಲೀಕರಣಕ್ಕೆ ಪ್ರಸ್ತುತ ರಾಜ್ಯ ಸರ್ಕಾರದ ಕೊಡುಗೆ’ ವಿಷಯವಾಗಿ ಅಂತರ ಕಾಲೇಜು ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ.
ಕಾಲೇಜಿನ ನಾಲ್ವಡಿ ಕೃಷ್ಣರಾಜ ಒಡೆಯರ ವೇದಿಕೆಯಲ್ಲಿ ಫೆ.20ರ ಬೆಳಗ್ಗೆ 10ಕ್ಕೆ ನಡೆಯುವ ಸ್ಪರ್ಧೆಯನ್ನು ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಮಂಜುಳಮಾನಸ ಉದ್ಘಾಟಿಸುವರು, ಪ್ರಾಂಶುಪಾಲ ಡಾ.ಎಂ.ಚನ್ನಬಸವೇಗೌಡ ಅಧ್ಯಕ್ಷತೆ ವಹಿಸುವರು.
ಆಸಕ್ತ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. (ಕೆ.ಎಂ.ಆರ್)