ಪ್ರಮುಖ ಸುದ್ದಿಮೈಸೂರು

600 ಕೋಟಿ ವೆಚ್ಚದಲ್ಲಿ ಹೊಸ ವಿಶ್ವದರ್ಜೆ ಸೆಟಲೈಟ್ ರೈಲು ನಿಲ್ದಾಣ ನಿರ್ಮಾಣ ಮಾಡಲಾಗುವುದು : ಪ್ರಧಾನಿ ಮೋದಿ

ಮೈಸೂರು,ಫೆ.19 :-  600 ಕೋಟಿ ವೆಚ್ಚದಲ್ಲಿ ಬೆಂಗಳೂರು ನಿಡಘಟ್ಟ ಮತ್ತು ನಿಡಘಟ್ಟ ಮೈಸೂರು ಹೊಸ ವಿಶ್ವದರ್ಜೆ ಸೆಟಲೈಟ್ ರೈಲು ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ  ಮಂಡ್ಯ, ಹಾಸನ, ಚಾಮರಾಜನಗರ,ಮೈಸೂರು,ಜಿಲ್ಲೆಗಳ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.  ಕನ್ನಡದಲ್ಲಿಯೇ ಮಾತು ಆರಂಭಿಸಿದ ಅವರು ಮೈಸೂರಿನ ನನ್ನ ಬಂಧು ಭಗಿನಿಯರಿಗೆ ನನ್ನ ನಮಸ್ಕಾರಗಳು. ತಾಯಿ ಚಾಮುಂಡೇಶ್ವರಿ ಮಾತೆಗೆ ನನ್ನ ನಮನಗಳು. ಮೈಸೂರು ಅರಸರು ಸರ್. ಎಂ. ವಿಶ್ವೇಶ್ವರಯ್ಯ ಸುತ್ತೂರು ಶ್ರೀ ಆದಿ ಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿ ಗಳಿಗೆ ನನ್ನ ನಮಸ್ಕಾರಗಳು ಮೈಸೂರು ಪಾಕ್ ಮೈಸೂರು ಪೇಟ ಮೈಸೂರು ಮಲ್ಲಿಗೆ ಜಗತ್ಪ್ರಸಿದ್ದ. ಹಾಗೆಯೇ ಇಲ್ಲಿ ನೆರೆದಿರುವ ನೀವೂ ಸಹ ಪ್ರಸಿದ್ಧರು ಎಂದು ಹೇಳಿದರು. ರೈಲ್ವೆ ಬಜೆಟ್ ಗಳ ಲ್ಲಿ ಈ ಹಿಂದೆ 15 ಸಾವಿರ ರೈಲು ಗಳ ಘೋಷಣೆಯಾಗಿತ್ತು. ಅದರೆ ಯಾವುದೂ ಕಾರ್ಯಗತವಾಗಿರಲಿಲ್ಲ. ಹೊಸ ರೈಲು ಗಳು ಕಣ್ಣಿಗೆ ಕಂಡಿರಲಿಲ್ಲ. ಮೈಸೂರು ಪ್ರವಾಸಿಗರ ಸ್ವರ್ಗ. ದೇಶದ ಸಾಮಾನ್ಯ ಜನ ಮೈಸೂರಿಗೆ ಬಂದು ಹೋಗುವ ಅಗತ್ಯವಿತ್ತು. ಮೈಸೂರು ಉದಯಪುರ ಹೊಸ ರೈಲು ಮಾರ್ಗ ಜೋಡಣೆಯಿಂದ ಎರಡೂ ರಾಜ್ಯಗಳು ಪರಸ್ಪರ ಪ್ರವಾಸೋದ್ಯಮ ಬೆಸೆಯುವ ಉದ್ದೇಶ ಸಾರ್ಥಕವಾಗಿದೆ. ಪ್ರವಾಸೋದ್ಯಮ ಉತ್ತೇಜನದಿಂದ ಆಟೋ ಟ್ಯಾಕ್ಸಿ ಬೀದಿ ಬದಿ ವ್ಯಾಪಾರ ಬಲಗೊಳ್ಳಲಿದೆ  ಎಂದರು.ಬೆಂಗಳೂರು ಮೈಸೂರು 6 ಪಥಗಳ ರಸ್ತೆ ವಿಸ್ತರಣೆ  600 ಕೋಟಿ ವೆಚ್ಚದಲ್ಲಿ ಬೆಂಗಳೂರು ನಿಡಘಟ್ಟ ಮತ್ತು ನಿಡಘಟ್ಟ – ಮೈಸೂರು ಹೊಸ ವಿಶ್ವದರ್ಜೆ ಸೆಟಲೈಟ್ ರೈಲು ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದರು.ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಎಷ್ಟು ದಿನ ಕಾಂಗ್ರೆಸ್‌ ಸರ್ಕಾರ ಇರುತ್ತೋ ಅಷ್ಟು ದಿನ ರಾಜ್ಯ ಬರ್ಬಾದ್ ಆಗಿರುತ್ತೆ. 50 ವರ್ಷ ಆಡಳಿತ ಮಾಡಿದ್ದೀರಿ. ಆಗ ಅಭಿವೃದ್ಧಿ ಬಗ್ಗೆ ಮಾತನಾಡದವರು ಈಗ ಬಡಬಡಾಯಿಸುತ್ತಿದ್ದೀರಿ. ಇಷ್ಟು ದಿನ ನಿಮ್ಮ ಬಾಯಿಗೆ ಬೀಗ ಹಾಕಿದ್ದವರು ಯಾರು ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಅಭಿವೃದ್ಧಿ ಅಗತ್ಯವಿದೆ. ಬೆಂಗಳೂರಿನಲ್ಲಿ ಹೇಳಿದ್ದೆ 10 ಪರ್ಸೆಂಟ್ ಸರ್ಕಾರ ರಾಜ್ಯದಲ್ಲಿದೆ ಅಂತ. ತುಂಬಾ ಜನ ಫೋನ್ ಮಾಡಿದ್ದರು. ಮೆಸೇಜ್ ಕಳಿಸಿದ್ದರು. ಹಲವರು ಬೇಜಾರು ಮಾಡಿಕೊಂಡಿದ್ದರು. ಯಾಕಂದರೆ ನಮಗೆ ಸರಿಯಾಗಿ ಗೊತ್ತಿಲ್ಲ ಅಂತ. ರಾಜ್ಯದಲ್ಲಿ ಕೇವಲ ಹತ್ತಲ್ಲ ಅದಕ್ಕೂ ಹೆಚ್ಚಿದೆ ಎಂದು. ನಿಮಗೆ ಕಮಿಷನ್ ಸರ್ಕಾರ ಬೇಕಾ ಅಥವಾ ಮಿಶನ್ ಸರ್ಕಾರ ಬೇಕಾ ನೀವೇ ನಿರ್ಧರಿಸಿ  ಎಂದರು. ಮೈಸೂರು ದೇಶದಲ್ಲಿ ಸದ್ಭಾವನೆ ಮೂಡಿಸಿದ ಇತಿಹಾಸ ಹೊಂದಿದೆ. ಇಲ್ಲಿಂದ ಆಯ್ಕೆಯಾದವರು ಹಾದಿ ತಪ್ಪುವುದಿಲ್ಲ. ಒಮ್ಮೆ ಮೈಸೂರು ಎದ್ದು ನಿಲ್ಲಬೇಕಿದೆ. ನಮ್ಮ ಕನಸು ಯುವಜನರನ್ನು ಸ್ವಂತ ಬಲದಲ್ಲಿ ನಿಲ್ಲುವಂತೆ ಮಾಡುವುದಾಗಿದ್ದು, ಉದ್ಯೋಗಕ್ಕೆ ಅಲೆಯುವುದನ್ನು ತಪ್ಪಿಸುವುದಾಗಿದೆ. ಬಡವರಿಗಾಗಿ ಕೇಂದ್ರದಿಂದ ಹಣ ನೀಡಲಾಗುತ್ತಿದೆ ಆದರೆ ರಾಜ್ಯ ಇದನ್ನು ಸರಿಯಾಗಿ ಬಳಸುತ್ತಿಲ್ಲ.ನವಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇವೆ. ಕರ್ನಾಟಕ ದಲ್ಲಿ ಒಂದೇ ಒಂದು ಬಡ ಕುಟುಂಬ ಸೂರು ರಹಿತವಾಗಿ ಇರಬಾರದು. ಪ್ರತಿ ಕುಟುಂಬಕ್ಕೂ ಸ್ವಂತ ಸೂರು ನೀಡುವುದು ನಮ್ಮ ಉದ್ದೇಶ. ನಮ್ಮ ಪ್ರಯತ್ನಕ್ಕೆ ರಾಜ್ಯ ದಲ್ಲಿ ಕಾಂಗ್ರೆಸ್ ಸರ್ಕಾರ ಅಡ್ಡಗೋಡೆಯಾಗಿ ನಿಲ್ಲುವ ಅಗತ್ಯವಿದೆಯೇ ಎಂದರು. ಮೈಸೂರು ಪೇಟ ತೊಡಿಸಿ, ಸ್ಮರಣಿಗೆ ನೀಡಿಗೌರವಿಸಲಾಯಿತು. ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಸದಾನಂದಗೌಡ, ಪ್ರಕಾಶ್ ಜಾವೇಡ್ಕರ್, ಬಿಜೆಪಿ ಪ್ರಮುಖರಾದ ರವಿಕುಮಾರ್, ಅಶೋಕ್, ಶೋಭಾ ಕರಂದ್ಲಾಜೆ, ಎಂ.ಶ್ರೀನಿವಾಸ್ ಪ್ರಸಾದ್, ಶ್ರೀರಾಮುಲು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: