ಮೈಸೂರು

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ : 50ಮಂದಿ ಪದವಿ ಸ್ವೀಕಾರ

ಮೈಸೂರು,ಫೆ.20-ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ನಗರದ ಕೃಷ್ಣಮೂರ್ತಿಪುರಂನಲ್ಲಿರುವ ರಾಮಮಂದಿರಲ್ಲಿ ಮಂಗಳವಾರ ಆಯೋಜಿಸಲಾಗಿತ್ತು. ನಿಕಟಪೂರ್ವ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್ ವೇದಿಕೆಯ ನೂತನ ಅಧ್ಯಕ್ಷ ಹೆಚ್.ಎನ್.ಶ್ರೀಧರಮೂರ್ತಿ ಅವರಿಗೆ ಸಂಘಟನೆಯ ಜವಬ್ದಾರಿ ಹಸ್ತಾಂತರಿಸಿದರು.

ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾಗಿ ಹೆಚ್.ಎನ್ ಶ್ರೀಧರಮೂರ್ತಿ, ಉಪಾಧ್ಯಕ್ಷರಾಗಿ ಮುಳ್ಳೂರು ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ವಿಕ್ರಂ ಅಯ್ಯಂಗಾರ್, ಖಜಾಂಚಿಯಾಗಿ ಅಜಯ್ ಶಾಸ್ತ್ರಿ, ಸಹಕಾರ್ಯದರ್ಶಿಗಳಾಗಿ ವಿನಯ್ ಕಣಗಾಲ್, ರಾಜಗೋಪಾಲ್ ಆಚಾರ್ಯ, ರಾಕೇಶ್ ಭಟ್, ಜಯಸಿಂಹ, ನಿಶಾಂತ್, ಕಡಕೊಳ ಜಗದೀಶ್, ಶ್ರೀಕಾಂತ್ ಕಶ್ಯಪ್, ರಂಗನಾಥ್, ಪ್ರಶಾಂತ್, ದೀಪಕ್, ಮನು ವೆಂಕಟರಾಮ್, ಸುಕೃತ್, ಮಧುಸೂಧನ್, ಪ್ರಶಾಂತ್ ಸೇರಿದಂತೆ 50ಮಂದಿ ಪದಗ್ರಹಣದಲ್ಲಿ ಪದವಿ ಸ್ವೀಕರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ, ಬ್ರಾಹ್ಮಣ ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಬ್ರಾಹ್ಮಣ ಯುವ ಸಮಾವೇಶ ರಾಜ್ಯದ ಗಮನ ಸೆಳೆಯಿತು. ಬ್ರಾಹ್ಮಣ ಯುವಶಕ್ತಿ ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಬಲಿಷ್ಟವಾಗಬೇಕಾದರೆ ನಮ್ಮ ಸಮುದಾಯದಲ್ಲಿರುವ ಉಪಪಂಗಡಗಳನೆಲ್ಲಾ ಬಿಟ್ಟು ಪ್ರತಿಯೊಬ್ಬರು ಓಗೊಟ್ಟಿನಿಂದ ಸಂಘಟಿತರಾಗಬೇಕು ಎಂದರು.

ನಂತರ ನಟಿ ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಮಾತನಾಡಿ, ಬ್ರಾಹ್ಮಣ ಸಮುದಾಯದಲ್ಲಿ ಹೆಚ್ಚು ಮಂದಿ ಸ್ವಾಭಿಮಾನರು. ಆದರೆ ಇಂದಿನ ಸಮಾಜ ವ್ಯಾಪಾರೀಕರಣವಾಗಿರುವ ಸಂಧರ್ಭದಲ್ಲಿ ಶಿಕ್ಷಣ ಆರೋಗ್ಯ ಉದ್ಯೋಗ ಕ್ಷೇತ್ರಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳು ಸಂಕಷ್ಟದ ಪರಿಸ್ಥಿತಿಯಲ್ಲಿದೆ. ವಿಪ್ರ ಕುಟುಂಬಗಳ ಅಭಿವೃದ್ಧಿಯ ಅಂಶವನ್ನು ಗಮನಿಸಿದರೆ ವೇದ ಉಪನಿಷತ್ ಗಳ ಉಳಿವು ಮತ್ತು ಶಿಕ್ಷಣದ ಅಗತ್ಯೆಗಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿತವಾಗಬೇಕಾಗಿದೆ. ಸರ್ಕಾರಿ ಸವಲತ್ತುಗಳ ಅವಶ್ಯಕತೆಗಾಗಿ ತೆಲಂಗಾಣ ಮಾದರಿಯಲ್ಲಿ ಬ್ರಾಹ್ಮಣ ನಿಗಮ ಮಂಡಳಿ ರಚನೆಯಾಗಬೇಕು. ಪ್ರತೊಯೊಂದು ಕ್ಷೇತ್ರದಲ್ಲೂ ಪ್ರತಿಭಾವಂತ ಬ್ರಾಹ್ಮಣರು ಮುಖ್ಯವಾಹಿನಿಗೆ ಬರಬೇಕಾದರೆ ಸಂಘಟನೆಯ ಮನೋಭಾವವ ಮುಖ್ಯವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮೂಗುರು ಕರ್ನಾಟಕ ಸಂಘದ‌ ಟಿ.ಎಸ್.ರವಿಶಂಕರ್, ಹೊಯ್ಸಳ ಕರ್ನಾಟಕ ಸಂಘದ ಸತ್ಯನಾರಾಯಣ್, ಹಳೆನಾಡು ಸಂಘದ ವಸಂತ್ ಕುಮಾರ್, ವಿಪ್ರ ಜಾಗೃತಿ ವೇದಿಕೆಯ ಸುರೇಶ್, ವಿಪ್ರ ಮಹಿಳಾ ಸಂಘದ ವೀಣಾ, ರಾಮಾನುಜ ಸಮಿತಿಯ ಪುಟ್ಟಸ್ವಾಮಿ, ವೈಷ್ಣವ ಸಂಘದ ಮುರಳಿ, ಅಡುಗೆ ಸಂಘದ ಪ್ರಶಾಂತ್ ತಾತಾಚಾರ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮುಖ್ಯ‌ಅತಿಥಿಗಳಾಗಿ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಕೆ.ರಘುರಾಂ ವಾಜಪೇಯಿ, ನಟಿ ರೂಪಾ ಅಯ್ಯರ್, ಡಿ.ಟಿ.ಪ್ರಕಾಶ್, ಶ್ರೀಹರಿ, ಟಿ.ಎಸ್.ರವಿಶಂಕರ್, ಮಾ.ವಿ.ರಾಮಪ್ರಸಾದ್, ಪಾರ್ಥಸಾರಥಿ, ಗಿರಿಧರ್ ಉಪಸ್ಥಿತರಿದ್ದರು. (ವರದಿ-ಎಂ.ಎನ್)

Leave a Reply

comments

Related Articles

error: