ಸುದ್ದಿ ಸಂಕ್ಷಿಪ್ತ

ಗುಮಾಸ್ತರ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಉಚಿತ ತರಬೇತಿ

ಮೈಸೂರು,ಫೆ.20:-ಜ್ಞಾನಬುತ್ತಿ ಸಂಸ್ಥೆ  ವಿವಿಧ ರಾಷ್ಟ್ರೀಕೃತ ಬ್ಯಾಂಕ್ (ಐ.ಬಿ.ಪಿ.ಎಸ್) ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ಆಯೋಜಿಸಿದೆ.

ಈ ತರಬೇತಿಯು ಸ್ಟ್ಯಾಫ್ ಸೆಲೆಕ್ಷನ್‍ಕಮಿಷನ್(ಎಸ್.ಎಸ್.ಸಿ), ಎಲ್.ಐ.ಸಿ, ನ್ಯಾಷನಲ್ ಇನ್ಸುರೆನ್ಸ್, ಆರ್.ಬಿ.ಐ. ಆರ್.ಆರ್.ಬಿ ಯವರು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುತ್ತದೆ. ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್‍ಗಳವರು 30,000 ಕ್ಕೂ ಹೆಚ್ಚು ಅಧಿಕಾರಿಗಳ ಹಾಗೂ ಗುಮಾಸ್ತರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ 2018ನೇ ಸಾಲಿನಲ್ಲಿ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಆಸಕ್ತರು ಫೆ. 27 ರೊಳಗಾಗಿ ಪ್ರತಿದಿನ ಸಂಜೆ 5.30ರಿಂದ 7.30ರವರೆಗೆ ಮೈಸೂರಿನ ಬಲ್ಲಾಳ್ ವೃತ್ತದ ಹತ್ತಿರವಿರುವ ಲಕ್ಷ್ಮಿಪುರಂ ಸರ್ಕಾರಿ ಪ್ರೌಢಶಾಲೆ(ಲಕ್ಷ್ಮಿಪುರಂ ಪೋಲೀಸ್ ಠಾಣೆ ಪಕ್ಕ)ಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.ಹೆಚ್ಚಿನ ವಿವರಗಳಿಗೆ 9448117455 ಸಂಪರ್ಕಿಸಲು ಕೋರಲಾಗಿದೆ. (ಎಸ್.ಎಚ್)

Leave a Reply

comments

Related Articles

error: