ಮೈಸೂರು

ಸಮಾರೋಪಗೊಂಡ ಗೃಹರಕ್ಷಕ ದಳದ ತರಬೇತಿ ಶಿಬಿರ

ham_0051-webಮೈಸೂರು ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಏರ್ಪಡಿಸಲಾಗಿದ್ದ ಹತ್ತು ದಿನಗಳ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಬುಧವಾರ ನಡೆಯಿತು. ಜಿಲ್ಲಾ ಶಸಸ್ತ್ರ ಮಿಸಲು ಪಡೆ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಎಚ್‍.ಟಿ. ಶೇಖರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು. ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಸಿ.ವಿ. ಆನಂದರೆಡ್ಡಿ; ಮೈಸೂರು ವಲಯದ ಸರಸ್ವತಿಪುರಂ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಈಶ್ವರನಾಯಕ್ ಜಿ;  ಚಾಮರಾನಗರ ಜಿಲ್ಲೆ ಕ್ಯಾಂಪ್ ಕಮಾಂಡೆಂಟ್ ಹಾಗೂ ಪ್ರಭಾರ ಬೋಧಕರಾದ ಎಂ. ರಾಮಣ್ಣ ಉಪಸ್ಥಿತರಿದ್ದರು.

 

ham_0034-web

Leave a Reply

comments

Related Articles

error: