ದೇಶ

ಪಾಕಿಸ್ತಾನಿ ನುಸುಳುಕೋರನ ಹತ್ಯೆ

ದೇಶ(ನವದೆಹಲಿ)ಫೆ.20:- ಬಿಎಸ್ ಎಫ್ ಮತ್ತು ಪಂಜಾಬ್ ಪೊಲೀಸರು ಭಾರತ್ ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೋರನನ್ನು ಹತ್ಯೆಗೈದಿದ್ದಾರೆ.

ಹತ್ಯೆಯಾದ ವ್ಯಕ್ತಿಯ ಬಳಿ 10ಕೆ.ಜಿ ಡ್ರಗ್ಸ್, ಆಯುಧಗಳು ಮತ್ತು ಯುದ್ಧ ಸಾಮಾಗ್ರಿಗಳು ಇತ್ತು ಎಂದು ಹೇಳಲಾಗಿದೆ. ಭದ್ರತಾಪಡೆಗಳು ಆತನಿಗೆ ನಿಲ್ಲುವಂತೆ ಹೇಳಿದಾಗ ಆತ ಗುಂಡು ಹಾರಿಸಲು ಆರಂಭಿಸಿದ. ಅದಕ್ಕಾಗಿ ಸುರಕ್ಷತೆಯ ದೃಷ್ಟಿಯಲ್ಲಿ ಆತನನ್ನು ಹತ್ಯೆಗೈಯ್ಯಲಾಗಿದೆ, ಬಿಎಸ್ ಎಫ್ ಮತ್ತು ಪಂಜಾಬ್ ಪೊಲೀಸರು ನುಸುಳುಕೋರರು ಮತ್ತು ಮಾದಕ ದ್ರವ್ಯ ಸಾಗಾಣೆದಾರರನ್ನು ಬಲೆ ಬೀಸಿದ್ದರು. ಓರ್ವ ಬರುವುದನ್ನು ಗಮನಿಸಿದ ತಂಡ ಆತನನ್ನು ನಿಲ್ಲಲು ಕೇಲಿದೆ. ಆದರೆ ಆತ ಗುಂಡು ಹಾರಿಸಿದ್ದಾನೆ. ಬಳಿಕ ಬಿಎಸ್ ಎಫ್ ಮತ್ತು ಪಂಜಾಬ್ ಪೊಲೀಸರು ಕೂಡ ಕಾರ್ಯಾಚರಣೆ ನಡೆಸಿದರು. ಇದರಿಂದ ಆತ ಕೊಲ್ಲಲ್ಪಟ್ಟ  ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: