ಮೈಸೂರು

ಕೆ.ಎಸ್.ಪುಟ್ಟಣ್ಣಯ್ಯ ನಿಧನಕ್ಕೆ ಸಿಪಿಐ ಸಂತಾಪ

ಮೈಸೂರು,ಫೆ.20 : . ರೈತ ಹೋರಾಟಗಾರ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ ತೀವ್ರ ಸಂತಾಪ ಸೂಚಿಸಿದೆ.

ಪುಟ್ಟಣ್ಣಯ್ಯನವರು ನಡೆಸಿರುವ ಎಲ್ಲಾ ಸಾಮಾಜಿಕ ಕಳಕಳಿಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು, ಕೆಲವೊಂದು ರೈತ ಚುಳುವಳಿಗೆ ಮುಂದಾಳತ್ವ ವಹಿಸಿದ್ದ ಅವರು ಜಾಗತೀಕರಣ ನೀತಿಗಳನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು ಎಂದು ತಿಳಿಸಿದೆ.

ಕೃಷಿ ಚಟುವಟಿಕೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದ ಪುಟ್ಟಣ್ಣಯ್ಯನವರು ಉತ್ತಮ ವಾಗ್ಮಿ ಎಂದು, ರೈತರ ಒಳಿತಿಗಾಗಿ ನಿರಂತರ ಹೋರಾಟ ನಡೆಸಿದ್ದರು. ಅವರ ನಿಧನದಿಂದ ರೈತ ಹಾಗೂ ಪ್ರಗತಿಪರ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಸಂತಾಪ ಸೂಚಿಸಿದ್ದು, ಅವರ ಆದರ್ಶ ಎಲ್ಲಾ ಹೋರಾಟ, ಚಳುವಳಿಗಳಿಗೆ ದಾರಿ ದೀಪವಾಗಬೇಕೆಂದು ಪಕ್ಷ ಆಶಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: