ಮೈಸೂರು

ಎನ್‍ಸಿಸಿ ಕೆಡೆಟ್‍ ಗಳಿಗೆ ಸನ್ಮಾನ

ಮೈಸೂರು,ಫೆ.20:- ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಸೂರಿನ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳಾದ ಎಂ.ಯು. ಮಂಜು ಮತ್ತು ಕೆ.ಎನ್. ಕಾರ್ತಿಕ್ ಮತ್ತು ಸೆಪ್ಟೆಂಬರ್ 2017ರಲ್ಲಿ ನವದೆಹಲಿಯಲ್ಲಿ ನಡೆದ ತಳಸೈನಿಕ ಶಿಬಿರದಲ್ಲಿ ಭಾಗವಹಿಸಿದ್ದ ಅರ್ಪಿತಾ ಥಾಮಸ್ ಅವರುಗಳನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ಮೈಸೂರಿನ 14 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಕಮಾಂಡಿಂಗ್ ಅಧಿಕಾರಿಯಾದ ಕರ್ನಲ್ ಎಂ.ಪಿ. ಅರವಿಂದ್ ಅವರು ಕೆಡೆಟ್‍ಗಳನ್ನು ಸನ್ಮಾನಿಸಿ ಮಾತನಾಡಿ “ ಮೈಸೂರು ವಿಭಾಗದಿಂದ ಮಂಜು ಎಂ.ಯು ಅವರು ಮಾತ್ರವೇ ರಜಪಥ್ ಮಾರ್ಚಿಂಗ್ ಕಂಟಿಂಜೆಂಟ್‍ನಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯವಾಗಿದೆ. ಶಿಸ್ತನ್ನು ರೂಢಿಸಿಕೊಂಡಾಗ ಸಾಧನೆಗಳ ಮೆಟ್ಟಿಲೇರಲು ಸಾಧ್ಯ” ಎಂದು ತಿಳಿಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಮಹದೇವಪ್ಪನವರು ಅಧ್ಯಕ್ಷತೆ ವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಸೋಮಶೇಖರ ಮತ್ತು ಎನ್‍ಸಿಸಿ ಅಧಿಕಾರಿಗಳಾದ ಲೆಪ್ಟಿನೆಂಟ್ ಡಾ. ಎಲ್. ವಿನಯ್‍ಕುಮಾರ್ ಹಾಗೂ ಸುಬೇದಾರ್ ಮೇಜರ್ ರಘುಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: