ಪ್ರಮುಖ ಸುದ್ದಿಮೈಸೂರು

ನೋಟು ರದ್ದು ಹಿನ್ನೆಲೆ: ಮಲೆ ಮಹದೇಶ್ವರ ಬೆಟ್ಟದಲ್ಲಿ 1.24 ಕೋಟಿ ರು. ಸಂಗ್ರಹ

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು. ನೋಟು ರದ್ದು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಹಲವು ದೇವಸ್ಥಾನಗಳ ಬೊಕ್ಕಸ ತುಂಬಿ ತುಳುಕಲಾರಂಭಿಸಿದೆ. ಕಾಳಧನವೆಲ್ಲ ಈಗ ದೇವರ ಹುಂಡಿ ಸೇರುತ್ತಿದೆ. ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲೂ ಕೂಡ ದಾಖಲೆಯ ಹಣ ಸಂಗ್ರಹವಾಗಿದೆ.

ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ದೇವಾಲಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ 500 ಮತ್ತು 1000 ಮುಖ ಬೆಲೆಯ ನೋಟು ಹೆಚ್ಚಳವಾಗಿ ಸಂಗ್ರಹವಾಗಿದೆ. ಹುಂಡಿಯಲ್ಲಿ 1.24 ಕೋಟಿ ರೂ. ನಗದು, 1.5 ಕೆಜಿ ಬೆಳ್ಳಿ ಮತ್ತು 50 ಗ್ರಾಂ ಚಿನ್ನ ಸಂಗ್ರಹವಾಗಿದೆ. ಇಷ್ಟು ದಿನದವರೆಗೆ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು 10 ಲಕ್ಷ ರೂ.ವರೆಗೆ ಸಂಗ್ರಹವಾಗುತ್ತಿತ್ತು. ಆದರೆ, ಈ ಬಾರಿ 30 ಲಕ್ಷ ರೂ.ನಷ್ಟು ಹಣ ಸಂಗ್ರಹವಾಗಿದೆ. ದೇವಾಲಯದ ಸಿಬ್ಬಂದಿ ಮತ್ತು ಎಸ್‍ಬಿಎಂ ಬ್ಯಾಂಕ್ ಸಿಬ್ಬಂದಿ ಸೇರಿ 80 ಕ್ಕೂ ಹೆಚ್ಚು ಜನ ನೋಟುಗಳನ್ನು ಎಣಿಸಿದ್ರು. ಈ ಹಣವು ಮಲೆಮಹದೇಶ್ವರ ಬೆಟ್ಟ ಪ್ರಾಧಿಕಾರದ ಖಾತೆಗೆ ಜಮಾ ಆಗಲಿದೆ.

ದೊಡ್ಡ ಗಣೇಶ ದೇಗುಲ: ಮಂಗಳವಾರ ಬೆಂಗಳೂರಿನಲ್ಲಿರುವ ದೊಡ್ಡ ಗಣೇಶ ದೇಗುಲದ ಹುಂಡಿ ಎಣಿಕಾ ಕಾರ್ಯ ನಡೆಯಿತು. ಸಾವಿರ, ಐನೂರು ನೋಟುಗಳ ಬಂಡಲ್‍ಗಳು, ಹೊಸ ಎರಡು ಸಾವಿರದ ನೋಟುಗಳು ಹಾಗೂ ಫಾರಿನ್ ನೋಟುಗಳು ಸಿಕ್ಕಿದೆ. ದೇಗುಲದಲ್ಲಿ ವರ್ಷಕ್ಕೆ 4 ಬಾರಿ ಹುಂಡಿ ಎಣಿಕಾ ಕಾರ್ಯ ನಡೆಯುತ್ತಿದ್ದು, ಈ ಬಾರಿ ಮೂರು ಪಟ್ಟು ಹೆಚ್ಚು ಹಣ ಸಂಗ್ರಹವಾಗಿದೆ.

Leave a Reply

comments

Related Articles

error: